Focus NewsImportant
Trending

ನೀರಿನ ಟ್ಯಾಂಕಿನಲ್ಲಿ ಮಗನನ್ನು ಮುಳುಗಿಸಿ ತಾನೂ ಸಾವಿಗೆ ಶರಣಾದ ತಂದೆ: ಹೃದಯವಿದ್ರಾವಕ ಘಟನೆ

ಕುಮಟಾ: ಮಗನನ್ನು ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಸಾ-ಯಿಸಿ, ಬಳಿಕ ತಂದೆ ಸಹ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಉತ್ತರಕ್ನಡನ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ನಡೆದಿದೆ. ಕುಮಟಾ ಪಟ್ಟಣದ ಹಳೇ ಮೀನು ಮಾರುಕಟ್ಟೆ ಸಮೀಪದ ಪುರಸಭೆಯ ವಸತಿ ಗ್ರಹದಲ್ಲಿ ವಾಸುಸುತ್ತಿದ್ದ ಪೌರಕಾರ್ಮಿಕ ಶ್ರೀಧರ್ ಹರಿಜನ್ (45) ವಿಕಲಚೇತನ ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಶುಕ್ರವಾರ ತಡರಾತ್ರಿ ವಿಕಲಚೇತನ ಮಗನಾದ ಪ್ರೀತಮ್ ಹರಿಜನ್ (15) ಈತನ್ನು ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಸಾಯಿಸಿದ ಶ್ರೀಧರ್ ಹರಿಜನ್ ತಾನು ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ.

ನನ್ನನ್ನೇ ಮದುವೆಯಾಗು: ಯುವಕ ಬ್ಲಾಕ್ ಮೇಲ್? ಯುವತಿ ನೇಣಿಗೆ ಶರಣು

ಇಂದು ಮುಂಜಾನೆ ವಿಷಯ ತಿಳಿಯುತ್ತಿದ್ದಂತೆ ಅಕ್ಕ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕುಮಟಾ ಠಾಣೆ ಪೊಲೀಸರು, ಶವವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಪ್ರೀತಮ್ ಹರಿಜನ್ ಈತನು ಜನಿಸುತ್ತಲೇ ಅಂಗವಿಕಲನಾಗಿದ್ದು, ಈತನ ಚಿಕಿತ್ಸೆಗಾಗಿ ಸಾಕಷ್ಟು ಕಷ್ಟಪಟ್ಟರು ಸಹ ಮಗ ಸರಿಹೊಗಿದೇ ಇದ್ದ ಕಾರಣ ನೊಂದ ತಂದೆಯು ಮಗನನ್ನು ಸಾಯಿಸಿ ತಾನು ಸಾವಿಗೆ ಶರಣಾಗಿದ್ದಾನೆ ಎಂಬುದು ಸಾರ್ವಜನಿಕ ವಲಯದ ಮಾತಾಗಿದೆ. ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Back to top button