ಹೊನ್ನಾವರ: ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಗ್ಯಾಸ್ ತುಂಬಿಸಿಕೊಂಡು ಚಲಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಹೊನ್ನಾವರ ಪಟ್ಟಣದ ಶರಾವತಿ ಸರ್ಕಲ್ ಸಮೀಪ ಪಲ್ಟಿಯಾಗಿದೆ.
ಎದುರಗಡೆ ಬಂದ ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋಗಿ ಒಮ್ಮೆಲ್ಲೆ ಬ್ರೇಕ್ ಹಾಕಿದ ಪರಿಣಾಮ ಟ್ಯಾಂಕರ್ ಪಲ್ಟಿಯಾಗಿ ಸಮೀಪದಲ್ಲೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಹೋಡೆದ ಪರಿಣಾಮ ವಿದ್ಯುತ್ ಕಂಬ ತುಂಡಾಗಿತ್ತು.
ಗ್ಯಾಸ್ ಟ್ಯಾಂಕರ್ ಲೀಕ ಭೀತಿಯಿಂದ ಅಗ್ನಿಶಾಮಕ ಹೆಸ್ಕಾಂ ಪೊಲೀಸ್ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕಾಗಮಿಸಿ ಗ್ಯಾಸ್ ಲೀಕ್ ಆಗುತ್ತಿದೆಯಾ ಎಂದು ಪರಿಶೀಲನೆ ನಡೆಸಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡರು. ಅಗ್ನಿಶಾಮಕ ಸಿಬ್ಬಂದಗಳು ನೀರು ಸಿಂಪರಣೆ ನಡೆಸಿ ಸುಕ್ಷತಾ ಕ್ರಮ ಕೈಗೊಂಡರು.
ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿರುದರಿಂದ ಕ್ರೇನ್ ಮೂಲಕ ಪಕ್ಕಕೆ ಸರಿಸುವ ಮೂಲಕ ಸಂಚಾರಕ್ಕೆ ಸುಗಮಗೊಳಿಸಿದಾರೆ.ಟ್ಯಾಂಕರ್ ಚಾಲಕ ಹಾಗೂ ನಿರ್ವಾಹಕರಿಗೆ ಸಣ್ಣಪುಟ್ಟ ಗಾಯಗಳಾಗಿದು, ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಟ್ಯಾಂಕರ್ ಪಲ್ಟಿಯಾದ ಹಿನ್ನಲೆ ಸುತ್ತಮುತ್ತಲಿನ ೧ ಕೀ.ಮೀ ವ್ಯಾಪ್ತಿಯಲ್ಲಿ ಹೊಟೇಲ್ ಮನೆಗಳಲ್ಲಿ ಗ್ಯಾಸ್ ಬಳಸದಂತೆ ಮಾಹಿತಿ ನೀಡಲಾಯಿತು. ಇದರಿಂದ ಗ್ರಾಹಕರಿಗೆ ಮಧ್ಯಾಹ್ನದ ಊಟ ಹಾಗೂ ತಿಂಡಿ ವಿತರಣೆಗೆ ಸಮಸ್ಯೆಯಾಯಿತು.
ಕಳೆದ ಕೆಲ ವರ್ಷದ ಹಿಂದೆ ಪಕ್ಕದ ತಾಲೂಕಿನ ಬರ್ಗಿ ದುರಂತದ ಸನ್ನಿವೇಶ ನೆನೆದು ಅಂತಹದೇ ಘಟನೆಯಿಂದ ಸಾರ್ವಜನಿಕರು ಒಮ್ಮೆಲ್ಲೆ ಭಯಗೊಂಡರು. ಪೊಲೀಸ್ ಇಲಾಖೆಯವರು ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿ ಮುನ್ನೆಚ್ಚರಿಕೆಯ ಕ್ರಮ ಕೈಗೊಂಡರು.
ಐ.ಆರ್.ಬಿ ಕಂಪನಿಯವರು ಹೆದ್ದಾರಿ ಕಾಮಗಾರಿ ನಡೆಸುತ್ತಿದ್ದು, ಪಟ್ಟಣದಲ್ಲಿ ನಿಧಾನಗತಿಯ ಕಾಮಗಾರಿ ಹಾಗೂ ೪೫ ಮೀಟರ್ ಅಗಲದಿಂದ ಮೂವತ್ತು ಇಳಿಕೆ ಮಾಡಿರುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ವಿಸ್ಮಯ ನ್ಯೂಸ್, ಹೊನ್ನಾವರ