ಅಂಕೋಲಾ: ಕೇರಳದಿಂದ ಕರ್ನಾಟಕ ಮಾರ್ಗವಾಗಿ ಗುಜರಾತಿಗೆ ಸರಕು – ಸಾಮಗ್ರಿ ಸಾಗಿಸುತ್ತಿದ್ದ ಲಾರಿ ಚಾಲಕನೋರ್ವ, ದಾರಿಮಧ್ಯೆ ಅಸ್ವಸ್ಥಗೊಂಡು ಮೃತ ಪಟ್ಟ ಘಟನೆ ನಡೆದಿದೆ. ಅಂಕೋಲಾ ತಾಲೂಕಿನ ಆಂದ್ಲೆ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ಸಂಭವಿಸಿದೆ.
ಕೇರಳ ತಿರುವನಂತಪುರಮ್ ಜವಾಹರ್ ಪಾರ್ಕ್ ಕಡಾಯಿಲ್ ವೀಡು ನಿವಾಸಿ ಅನೀಸಕುಮಾರ್ ಅರ್ಮುಗಂ (30) ಮೃತ ದುರ್ದೈವಿ ಚಾಲಕನಾಗಿದ್ದಾನೆ. ಈತ ತನ್ನ ಸಹ ಚಾಲಕನೊಂದಿಗೆ ಕೆ.ಎಲ್ 01 ಸಿ.ವೈ 0502 ಲಾರಿಯಲ್ಲಿ ಸರಕು ತುಂಬಿ ಕೇರಳದಿಂದ ಗುಜರಾತಿಗೆ ಹೊರಟಿದ್ದು , ಜೂನ್ 1 ರ ರಾತ್ರಿ 11 ಘಂಟೆಗೆ ಹೊನ್ನಾವರದಲ್ಲಿ ಊಟ ಮುಗಿಸಿ ಮತ್ತೆ ಪಯಣ ಮುಂದುವರೆಸಿ, ಹೆದ್ದಾರಿಯಲ್ಲಿ ಲಾರಿ ಚಲಾಯಿಸಿಕೊಂಡು ಬಂದಿದ್ದು, ಜೂನ್ 2 ರ ಮಧ್ಯರಾತ್ರಿ 1 ಘಂಟೆಗೆ ಅಂಕೋಲಾ ತಾಲೂಕಿನ ಆಂದ್ಲೆ ಕ್ರಾಸ್ ಬಳಿ ಬರುತ್ತಿದ್ದಂತೆ, ಅದಾವುದೋ ಕಾರಣದಿಂದ ಆರೋಗ್ಯದಲ್ಲಿ ಏರು ಪೇರಾಗಿ, ಅಸ್ವಸ್ಥಗೊಂಡು ವಾಹನದ ಮೇಲಿನ ತನ್ನ ನಿಯಂತ್ರಣ ಕಳೆದು ಕೊಂಡು, ಅಲ್ಲಿಯೇ ಒರಗಿ ಬಿದ್ದಿದ್ದಾನೆ.
ಈ ವೇಳೆಗಾಗಲೇ ವಾಹನದ ಚಕ್ರಗಳು ಹೆದ್ದಾರಿ ಮಧ್ಯದ ಡಿವೈಡ್ ರ ಪಾಸ್ ಮಾಡಿ, ಮೇಲ್ನೋಟಕ್ಕೆ ರಸ್ತೆ ಅಪಘಾತದಂತೆ ಕಾಣಿಸುತ್ತಿತ್ತು ಎನ್ನಲಾಗಿದೆ. ಈ ಘಟನೆ ಸಂಭವಿಸಿರುವದು ಗಮನಕ್ಕೆ ಬರುತ್ತಲೇ ಅದೇ ವಾಹನದಲ್ಲಿದ್ದ ಸಹ ಚಾಲಕ, ಪರಿಸ್ಥಿತಿ ಅರಿತು, ಬೇರೆ ಲಾರಿ ಚಾಲಕರ ಸಹಾಯದಿಂದ ಅನಿ ಸಕುಮಾರ ಈತನನ್ನು ಅಂಬುಲೆನ್ಸ್ ಮೂಲಕ ಅಂಕೋಲಾ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅನೀಸಕುಮಾರ್ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಚಾಲಕನ ಸಾವಿನ ಕುರಿತಂತೆ ಸಹ ಚಾಲಕ ಕೇರಳದ ಸುನೀಲಕುಮಾರ ಎನ್ನುವವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪಿ.ಎಸ್. ಐ ಕುಮಾರ ಕಾಂಬಳೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಸರಕಾರಿ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕೇರಳದಿಂದ ಮೃತನ ಕುಟುಂಬಸ್ಥರು, ಮತ್ತಿತರರು ಬಂದು ತಮ್ಮದೇ ಅಂಬುಲೆನ್ಸ ಮೂಲಕ ಮೃತ ದೇಹವನ್ನು ಊರಿಗೆ ಸಾಗಿಸಿದ್ದಾರೆ. ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು – ಕಾರ್ಯಕರ್ತ ರು ಸ್ಥಳದಲ್ಲಿ ಹಾಜರಿದ್ದು , ಕೇರಳಿಗರಿಗೆ ಸಹಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ