Follow Us On

WhatsApp Group
Focus NewsImportant
Trending

ಗ್ರಾಹಕರ ಸೋಗಿನಲ್ಲಿ ಚಿನ್ನದ ಅಂಗಡಿಗೆ ಬಂದು ಲಕ್ಷಾಂತರ ರೂಪಾಯಿ ಚಿನ್ನಾಭರಣ ಕದ್ದ ಕಳ್ಳಿಯರು!

ಶಿರಸಿ: ಚಿನ್ನದ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ರೂಪಾಯಿ ಬಂಗಾರವನ್ನು ಕಳ್ಳತನ ಮಾಡಿರುವ ಘಟನೆ ನಗರದ ಐದು ರಸ್ತೆ ಸಮೀಪ ಇರುವ ಓಂಕಾರ್ ಜ್ಯುವೇಲರ್ಸ್ನಲ್ಲಿ ನಡೆದಿದೆ. ಮೂರು ಮಹಿಳೆಯರು ಈ ಕೃತ್ಯ ನಡೆಸಿದ್ದು, ಇವರ ಕೈಚಳಕ ಸಿ.ಸಿ. ಕ್ಯಾಮರಾದಲ್ಲಿ ಈ ಕೃತ್ಯವು ಸೆರೆಯಾಗಿದೆ. ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕಳ್ಳಿಯರು ಗದಗ್ ಮೂಲದವರು ಎನ್ನಲಾಗಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button