Follow Us On

WhatsApp Group
Focus NewsImportant
Trending

ಮನೆಯಲ್ಲಿ ಸ್ವಿಚ್ ಹಾಕುವಾಗ ಶಾಕ್ ಹೊಡೆದು ವ್ಯಕ್ತಿ ಸಾವು

ಹೊನ್ನಾವರ: ಬ್ಯಾಟರಿ ಜಾರ್ಚ್ ಮಾಡಲು ಬೆಡ್ ರೂಮನಲ್ಲಿರುವ ವಿದ್ಯುತ್ ಸ್ವೀಚ್ ಬೋರ್ಡಿಗೆ ಕೈ ಹಾಕಿದಾಗ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊರ್ವ ಮೃತಪಟ್ಟ ಘಟನೆ ನಡೆದಿದೆ. ತಾಲೂಕಿನ ಮೇಲಿನ ಮೂಡ್ಕಣಿ ನಿವಾಸಿ ಆಚಾರಿ ವೃತ್ತಿ ನಿರ್ವಹಿಸುತ್ತಿದ್ದ ರಾಮಕೃಷ್ಣ ಶಂಕರ ಆಚಾರಿ(30) ಮೃತ ದುರ್ದೈವಿ. ರವಿವಾರ ಬೆಳಗ್ಗೆ 10-30ರ ಸುಮಾರಿಗೆ ಮೇಲಿನ ಮೂಡ್ಕಣಿ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಈತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ, ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಮೃತನ ಸಹೋದರ ಕೇಶವ ಶಂಕರ ಆಚಾರಿ ದೂರಿನಲ್ಲಿ ತಿಳಿಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button