Focus NewsImportant
Trending

ಜೋಯ್ಡಾದಲ್ಲಿ ಅಕ್ರಮವಾಗಿ ಸಂಗ್ರಹಿಟ್ಟ ಅಪಾರ ಪ್ರಮಾಣದ ಉಸುಕು ವಶಕ್ಕೆ

ಜೊಯಿಡಾ : ತಾಲೂಕಿನ ಕಾಮರಾ ಊರಿನಲ್ಲಿ ಆಕ್ರಮವಾಗಿ ಸಂಗ್ರಹಿಟ್ಟ ಉಸುಕನ್ನು ಜೊಯಿಡಾ ತಹಶೀಲ್ದಾರ ವಶಕ್ಕೆ ಪಡೆದಿದ್ದಾರೆ.ಜೊಯಿಡಾ ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಕಾಮರಾ ಊರಿನಲ್ಲಿ ಎರಡು ಕಡೆಗಳಲ್ಲಿ ಆಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 8 ಟಿಪ್ಪರ್ ನಷ್ಟು ಮರಳನ್ನು ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೊಡ ಅವರ ಮಾರ್ಗದರ್ಶನದಲ್ಲಿ ಕಂದಾಯ ಇಲಾಖೆ ಮತ್ತು ಪೋಲಿಸ್ ಇಲಾಖೆಗಳ ಸಹಾಯದೊಂದಿಗೆ ಜಪ್ತ ಮಾಡಲಾಗಿದೆ.

ಅಂದಾಜು ಮೌಲ್ಯ 1 ಲಕ್ಷ 12 ಸಾವಿದಷ್ಟು ಆಗಬಹುದು ಎನ್ನಲಾಗುತ್ತಿದ್ದು,ಇದನ್ನು ಲೊಕೊಪಯೋಗಿ ಇಲಾಖೆಯಿಂದ ಹರಾಜು ನಡೆಸಿ ಸರಕಾರಕ್ಕೆ ಹಣ ಬರಣ ಮಾಡಲಾಗುತ್ತದೆ.ಈ ಸಂದರ್ಬದಲ್ಲಿ ಜೊಯಿಡಾ ತಹಶೀಲ್ದಾರ ಬಸವರಾಜ ತೆನ್ನಳ್ಳಿ, ರಾಮನಗರ ಪಿ.ಎಸ್.ಐ ಕೃಷ್ಣಕಾಂತ ಪಾಟೀಲ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಇದ್ದರು.

ವಿಸ್ಮಯ ನ್ಯೂಸ್ , ಜೋಯ್ಡಾ

Back to top button