Important
Trending

ಅಂಗಡಿಗೆ ಹೋಗಿ ಬರುತ್ತೇನೆಂದ ವೃದ್ಧ ಕಾಣೆ: ಈತನ ಮಾಹಿತಿ ಸಿಕ್ಕರೆ ನೀಡುವಂತೆ ಪೊಲೀಸರ ಪ್ರಕಟಣೆ

ಕುಮಟಾ: ತಾಲೂಕಿನ ಮೂರೂರು ಅಮ್ಮನವರ ದೇವಸ್ಥಾನದ ಹತ್ತಿರದ ಬಾಳೆಗುಡಿಯ ನಿವಾಸಿಯಾದ 84 ವರ್ಷದ ವೃದ್ಧ ಸುರೇಶ ಗೋವಿಂದ ಶೇಟ್ ಕಾಣೆಯಾಗಿದ್ದಾರೆ. ಜೂನ್ 17 ರಂದು ಅವರು ತಮ್ಮ ಚಹಾದ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ತೆರಳಿದ್ದು, ಅಂಗಡಿಗೂ ಹೋಗದೆ, ಇತ್ತ ಮನೆಗೂ ಬಾರದೆ ಇರುವದರಿಂದ ಕುಟುಂಬಸ್ಥರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತಾಗಿ ಪೊಲೀಸರು ತನಖೆ ಕೈಗೊಂಡಿದ್ದು, ಆದರೆ ಇದುವರೆಗೆ ಪತ್ತೆಯಾಗಿಲ್ಲ. 84 ವರ್ಷದ ವೃದ್ಧ ಸುರೇಶ ಗೋವಿಂದ ಶೇಟ್ ಅವರು ಪತ್ತೆಯಾದಲ್ಲಿ , ಅಥವಾ ಅವರ ಕುರಿತು ಮಾಹಿತಿ ಸಿಕ್ಕರೆ ಕೂಡಲೇ ಕುಮಟಾ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Back to top button