Focus News
Trending

ಸಿವಿಎಸ್‌ಕೆ ಪ್ರೌಢಶಾಲೆಯ ಶಾಲಾ ಸಂಸತ್‌ ಉದ್ಘಾಟನೆ

ಕುಮಟಾ: ಇಲ್ಲಿನ ಕೊoಕಣ ಎಜ್ಯುಕೇಶನ್‌ ಟ್ರಸ್ಟ್ನ ಸಿವಿಎಸ್‌ಕೆ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಹಾಗೂ ಹಲವು ಶಾಲಾ ಸಂಘಗಳನ್ನು ಬಾಳಿಗಾ ಕಾಲೇಜಿನ ನಿವೃತ್ತ ಸಂಸ್ಕೃತ ಪ್ರಾಚಾರ್ಯರಾದ ಶಂಕರ ಭಟ್ಟ ಉದ್ಘಾಟಿಸಿದರು. ನಂತರ ಮಾತನಾಡಿ, ಮುಂದಿನ ಭಾವಿ ಪ್ರಜೆಗಳಾಗುವ ತಮಗೆ ಪ್ರಜಾಪ್ರಭುತ್ವ ಹಾಗೂ ಸಂಸತ್ತಿನಕಲ್ಪನೆಯನ್ನು ಈ ಸಂಸತ್ ಕಲ್ಪಿಸಿಕೊಟ್ಟಿದೆ. ವಿದ್ಯಾರ್ಥಿಗಳು ಜೀವನದಲ್ಲಿಆತ್ಮವಿಶ್ವಾಸ, ಮನೋನಿಗ್ರಹ, ಬೆಳೆಸಿಕೊಂಡರೆ ಜೀವನದಲ್ಲಿಯಶಸ್ಸು ಸಾಧ್ಯಎನ್ನುತ್ತ, ಸರಕಾರದ ಹಲವು ಮಸೂದೆಗಳ ಕುರಿತು ವಿವರಿಸಿದರು. ಮುಖ್ಯಾಧ್ಯಾಪಕಿಯರಾದ ಸುಮಾ ಪ್ರಭು ಮಾತನಾಡಿ, ಮುಂದಿನ ದಿನಗಳಲ್ಲಿ ನೀವು ದೇಶಕಟ್ಟುವಉತ್ತಮರಾಜಕೀಯ ವ್ಯಕ್ತಿಗಳಾಗಿ ಎಂದು ಹಾರೈಸಿದರು.

ವಿಧಾತ್ರಿಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಶೈಕ್ಷಣಿಕ ಸಲಹೆಗಾರರಾದಆರ್.ಎಚ್.ದೇಶಭಂಡಾರಿ, ಶಿಕ್ಷಕ ಶಿವಾನಂದ ಭಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಸಂಸತ್ತಿನ ಮುಖ್ಯ ಕಾರ್ಯದರ್ಶಿ ವಿದ್ಯಾರ್ಥಿರಚನ್ ನಾಯ್ಕ, ವಿದ್ಯಾರ್ಥಿನಿ ಕನ್ನಿಕಾ ಹೆಗಡೆತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಂಸತ್‌ನಲ್ಲಿಆಯ್ಕೆಗೊoಡ ವಿದ್ಯಾರ್ಥಿಗಳಿಗೆ ಶಿಕ್ಷಕ ಜಯರಾಜ ಪ್ರಮಾಣವಚನ ಬೋಧಿಸಿದರು. ಶಾಲಾ ಕನ್ನಡ ಸಂಘ, ವಿಜ್ಞಾನ ಸಂಘ, ಸಮಾಜ ವಿಜ್ಞಾನ ಸಂಘ, ಕ್ರೀಡಾ ಸಂಘ, ಆಂಗ್ಲ ಭಾಷಾ ಸಂಘಗಳನ್ನು ಇದೇ ಸಂದರ್ಭದಲ್ಲಿಉದ್ಘಾಟಿಸಲಾಯಿತು.

ಶಿಕ್ಷಕಿ ವಾಣಿಶ್ರೀ ನಾಯ್ಕ ಸ್ವಾಗತಿಸಿದರೆ, ವಿದ್ಯಾರ್ಥಿಗಳಾದ ಸೃಜನಾ ನಾಯಕ, ಸ್ಪೂರ್ತಿ ಭಟ್ಟ, ಮಹಿಮಾ ಪೈ ನಿರೂಪಿಸಿದರು. ಶಿಕ್ಷಕಿ ವಿನಯಾ ನಾಯಕಧನ್ಯವಾದ ಸಮರ್ಪಿಸಿದರು.

ವಿಸ್ಮಯ ನ್ಯೂಸ್, ಕುಮಟಾ

Back to top button