ಮಳೆಯಬ್ಬರಕ್ಕೆ ಪ್ರವಾಹ ಪರಿಸ್ಥಿತಿ

ತುಂಬಿ ಹರಿಯುತ್ತಿರುವ ನದಿಗಳು
ಮತ್ತೆ ಪ್ರವಾಹದ ಭೀತಿ
ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಗಂಗಾವಳಿ

[sliders_pack id=”1487″]

ಶಿರಸಿ-ಯಲ್ಲಾಪುರ: ಕರಾವಳಿ, ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹದ ಭೀತಿ ಹೆಚ್ಚಿದೆ. ಅತಿಯಾದ ಮಳೆಗೆ ಗಂಗಾವಳಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ತಾಲೂಕಿನ ಗುಳ್ಳಾಪುರ ಸೇತುವೆಗೆ ತಾಗಿ ಹರಿಯುತ್ತಿದೆ. ಮಳೆ ಇದೇ ರೀತಿ ಮುಂದುವರಿದರೆ, ಸೇತುವೆ ಮುಳುಗಡೆಯಾಗುವುದು ಖಚಿತ ಎನ್ನಲಾಗಿದೆ. ಅಲ್ಲದೇ ಈಗಾಗಲೇ ಅಲ್ಲಿನ ರಸ್ತೆಗಳ ಮೇಲೆಯೇ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ.

ತೋಟ, ಗದ್ದೆಗಳಿಗೆ, ನದಿ ತಡದ ಮನೆಗಳಿಗೂ ನೀರು ನುಗ್ಗಿ, ಅವಾಂತರ ಸೃಷ್ಟಿಯಾಗುತ್ತಿದೆ. ಕಳೆದ ರ‍್ಷ ಕೂಡಾ ವರುಣನ ಅಬ್ಬರ ಹೆಚ್ಚಿದ್ದ ವೇಳೆ ಇದೇ ರೀತಿ ಅವಾಂತರ ಸೃಷ್ಟಿಯಾಗಿತ್ತು..
ಇನ್ನೊಂದೆಡೆ, ಶಿರಸಿಯಲ್ಲಿ ಮಳೆ ಅಬ್ಬರಿಸುತ್ತಿದ್ದು,ವಿದ್ಯುತ್ ಕಂಬಗಳು, ಬೃಹತ್ ಮರಗಳು ಧರೆಗುರುಳಿದೆ.

ಶಿರಸಿ- ಬನವಾಸಿ ರಸ್ತೆಯಲ್ಲಿ ಬೃಹತ್ ಮರ ಬಿದ್ದು, ಸಂಚಾರ ಸ್ಥಗಿತಗೊಂಡಿದೆ, ಗಣೇಶನಗರದಲ್ಲಿ ಮನೆ ಮೇಲೆ ಮರ ಬಿದ್ದು, ಮನೆಗೆ ಹಾನಿಯಾಗಿದೆ. ಅಲ್ಲದೇ ತಾಲೂಕಿನ ವಿವಿಧ ಗ್ರಾಮೀಣ ಮಾರ್ಗದಲ್ಲಿ ಕೂಡಾ ವಿದ್ಯುತ್ ಕಂಬ ಮುರಿದು ಬಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಜಿಲ್ಲೆಯ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ, ವರದಾ ಇನ್ನಿತರ ನದಿಗಳು ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿದೆ. ನದಿ ಪಕ್ಕದ ಮನೆ, ಕೃಷಿ ಭೂಮಿ, ರಸ್ತೆಗಳು ಜಲಾವೃತವಾಗಿದೆ. ಬೇಡ್ತಿ ನದಿಯು ಸೇತುವೆಗೆ ಹತ್ತಿರದಲ್ಲಿ ಹರಿಯುತ್ತಿದೆ. ಗುಳ್ಳಾಪುರದ ಬಳಿಯೂ ನದಿ ತುಂಬಿ ಹರಿದು ಸೇತುವೆಗೆ ತಾಗಿ ಹರಿಯುತ್ತಿದೆ.

ಬ್ಯೂರೋ ರಿಪರ‍್ಟ್ ವಿಸ್ಮಯ ನ್ಯೂಸ್

Exit mobile version