Uttara Kannada
Trending

ಕುಮಟಾ,ಹೊನ್ನಾವರದಲ್ಲಿ ಇಂದು ದಾಖಲಾದ ಕರೊನಾ ಪ್ರಕರಣ ಎಷ್ಟು?

ಕುಮಟಾದಲ್ಲಿ 14 ಕರೊನಾ ಕೇಸ್
ಹೊನ್ನಾವರದ ಇಬ್ಬರಲ್ಲಿ ಸೋಂಕು ಪತ್ತೆ

[sliders_pack id=”3498″]

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 14 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಕುಮಟಾ ತಾಲೂಕಿನ ಗುಡೆಅಂಗಡಿಯ 51 ವರ್ಷದ ಮಹಿಳೆ, ಹಳಕಾರ ಮದ್ಗುಣಿಯ 24 ವರ್ಷದ ಯುವತಿ, ಸಾಂತಗಲ್‌ನ 72 ವರ್ಷದ ವೃದ್ಧ, ಸಾಂತಗಲ್‌ನ 60 ವರ್ಷದ ಮಹಿಳೆ, ಹೆರವಟ್ಟಾದ 38 ವರ್ಷದ ಪುರುಷ, ಹಂದಿಗೋಣಿನ 65 ವರ್ಷದ ಪುರುಷ, ಹಂದಿಗೋಣಿನ 60 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕೊಡ್ಕಣಿಯ 25 ವರ್ಷದ ಯುವತಿ, ಕೊಡ್ಕಣಿಯ 21 ವರ್ಷದ ಯುವತಿ, ಕೊಡ್ಕಣಿಯ 52 ವರ್ಷದ ಮಹಿಳೆ, ಕೊಡ್ಕಣಿಯ 19 ವರ್ಷದ ಯುವಕ, ಹಳಕಾರದ 28 ವರ್ಷದ ಯುವತಿ, ಹಳಕಾರದ 32 ವರ್ಷದ ಪುರುಷ, ಮಾಸೂರಿನ 48 ವರ್ಷದ ಮಹಿಳೆಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಈ 14 ಸೋಂಕಿತರು ಕೂಡ ಹಿಂದೆ ಈ ಕುಮಟಾ ತಾಲೂಕಾ ವ್ಯಾಪ್ತಿಯಲ್ಲಿ ಸೋಂಕು ಕಾಣಿಸಿಕೊಂಡವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

ಹೊನ್ನಾವರ: ಮಂಗಳೂರ ಆಸ್ಪತ್ರೆಗೆ ತೆರಳಿದ ಹೊನ್ನಾವರ ತಾಲೂಕಿನ ಇಬ್ಬರಲ್ಲಿ ಕರೊನಾ ಪಾಸಿಟಿವ್ ಪತ್ತೆಯಾರುವ ಮಾಹಿತಿ ಲಭ್ಯವಾಗಿದೆ. ತಾಲೂಕಿನ ಮಂಕಿಯ 55 ವರ್ಷದ ಪುರುಷ ಹಾಗೂ 4 ವರ್ಷದ ಬಾಲಕಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ತರಳಿದ ಸಂದರ್ಭದಲ್ಲಿ ಕರೊನಾ ಪತ್ತೆಯಾಗಿದೆ. ಇಂದು ತಾಲೂಕಾ ಆಸ್ಪತ್ರೆಯಿಂದ ಇಬ್ಬರು, ಮಂಕಿ ಕೋವಿಡ್ ಸೆಂಟರ್‌ನಿAದ ಒಬ್ಬರು ಸೇರಿ ಒಟ್ಟು ಮೂರು ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಎಂಟು ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button