Follow Us On

WhatsApp Group
Focus NewsImportant

ರೋಹಿಣಿಯವರಿಗೆ ಕೇಂದ್ರೀಯ ಶಿಷ್ಯವೃತ್ತಿ

ಕುಮಟಾ: ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆಯ ಸದಸ್ಯೆ ಮತ್ತು ಸಂಗೀತ ಸಂಪನ್ಮೂಲವ್ಯಕ್ತಿ ವಿದುಷಿ ರೋಹಿಣಿ ಭಟ್ಟರಿಗೆ 2022-23 ನೇ ಸಾಲಿನ ಕೇಂದ್ರೀಯ ಶೋಧ ಶಿಷ್ಯವೃತ್ತಿ ಲಭಿಸಿದೆ. ಹಿಂದುಸ್ಥಾನಿ ಸಂಗೀತದ `ರಾಗಕಲ್ಪದ್ರುಮಾಂಕುರ’ ಎಂಬ ಸಂಸ್ಕೃತ ಗ್ರಂಥದ ವಿಮರ್ಶಾತ್ಮಕ ಅಧ್ಯಯನ ಮಾಡಿ ಶೋಧಪ್ರಬಂಧವನ್ನು ಮಂಡಿಸಲಿದ್ದಾರೆ.

ಸಂಗೀತ ಕ್ರಾಂತಿಕಾರಿ ಪಂ. ವಿಷ್ಣು ನಾರಾಯಣ ಭಾತಖಂಡೆಯವರ ಕ್ರಮಿಕ ಪುಸ್ತಕಮಾಲೆಯಲ್ಲಿರುವ ನೂರಾರು ರಾಗಗಳ ಹಿಂದಿ ಲಕ್ಷಣಗೀತೆಗೆ ಆಧಾರವಾದ ರಾಗಕಲ್ಪದ್ರುಮಾಂಕುರ ಗ್ರಂಥಕರ್ತೃ ಮಹಾರಾಷ್ಟçದ ಪರಲಿಗ್ರಾಮದವರಾದ ಕಾಶೀನಾಥ ಶಾಸ್ತಿç ಅಪ್ಪಾತುಲಸಿಯವರ ರಾಗಶ್ಲೋಕಗಳು ಮತ್ತು ರಾಗಲಕ್ಷಣಗೀತೆಗಳ ಕುರಿತಾಗಿ ತುಲನಾತ್ಮಕ ಅಧ್ಯಯನವನ್ನು ಕತಗಾಲದ ಡಾ ಕೆ ಗಣಪತಿ ಭಟ್ಟರ ಮತ್ತು ಪುಣೆಯ ಡಾ ಶೀತಲ ಮೋರೆಯವರ ಮಾರ್ಗದರ್ಶನದಲ್ಲಿ ರೋಹಿಣಿಯವರು ಕೈಗೊಳ್ಳಲಿದ್ದಾರೆ.

ಇದರೊಟ್ಟಿಗೆ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಷಯದಲ್ಲಿ ಪಿಎಚ್‌ಡಿ ಕಾರ್ಯ ಆರಂಭಿಸಿದ್ದಾರೆ. ವಾಯೋಲಿನ ವಾದನ ಮತ್ತು ಹಾಡುಗಾರಿಕೆಯಲ್ಲೂ ನಿಷ್ಣಾತರಾದ ಇವರು ಈಗಾಗಲೇ ರಾಗಕೋಶ, ಗಾನರಾಗ ರಸಾಯನ, ಪ್ರವಾಸ ಪಾರಾಯಣಸ್ತೋತ್ರ, ಸಂಗೀತಮoಗಲಾಷ್ಟಕ, ನಾರದೀಯ ಸಂಗೀತ ಪುಸ್ತಕಗಳನ್ನು ಸಂಪಾದಿಸಿ, ಕಲಾಶ್ರೀ ಸಂಸ್ಥೆಯ ಮೂಲಕ ಪ್ರಕಟಿಸಿದ್ದಾರೆ.
ಸದ್ಯ ರೋಹಿಣಿಯವರು ತಬಲಾವಾದಕ ಪತಿ ನಾಗೇಂದ್ರ ಭಟ್ಟ ಚಂದಗುಳಿಯವರೊoದಿಗೆ ತಮ್ಮದೇ ‘ನಾದಾಲೋಕ’ ಸಂಸ್ಥೆಯ ಮೂಲಕ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅವರಿಗೆ ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಅಧ್ಯಕ್ಷರಾದ ಎಚ್.ಎನ್.ಅಂಬಿಗ ಅಭಿನಂದಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button