ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋದ ಸವಾರ

ಅಂಕೋಲಾದಲ್ಲಿ ನಡೆದ ದುರ್ಘಟನೆ
ಹೊನ್ನಾವರದ ವ್ಯಕ್ತಿ ಕಾಣೆ?

[sliders_pack id=”3491″]

ಅಂಕೋಲಾ : ಹೊನ್ನಾವರ ತಾಲೂಕಿನ ಕಡ್ನೀರು ಮೂಲದ ವ್ಯಕ್ತಿಯೋರ್ವ ತನ್ನ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ರಸ್ತೆಗೆ ನುಗ್ಗುತ್ತಿದ್ದ ನೀರನ್ನು ಅಂದಾಜಿಸಲಾಗದೇ, ಆಯತಪ್ಪಿ ಬಿದ್ದು ಬೈಕ್ ಸಮೇತ ನೀರಿನಲ್ಲಿ ಕೊಚ್ಚಿಹೋದ ದುರ್ಘಟನೆ ಅಂಕೋಲಾ ತಾಲೂಕಿನ ಡೊಂಗ್ರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಸಂತೋಷ ಮೋಹನ ನಾಯ್ಕ (29) ಎಂಬಾತನೇ ನೀರಿನಲ್ಲಿ ಕೊಚ್ಚಿಹೋದ ದುರ್ದೈವಿಯಾಗಿರುತ್ತಾನೆ. ಈತನು ಕಳೆದ ವರ್ಷದಿಂದೀಚೆಗೆ ಅಂಕೋಲಾ ತಾಲೂಕಿನ ಡೊಂಗ್ರಿ ಗ್ರಾ.ಪಂ ವ್ಯಾಪ್ತಿಯ ಕಲ್ಲೇಶ್ವರದ ಒರ್ವ ತೋಟದ ಮಾಲಿಕರ ಬಳಿ ಕೃಷಿ ಕೂಲಿಕೆಲಸ ಮಾಡಿಕೊಂಡು ತನ್ನ ಹೆಂಡತಿ, ಮಕ್ಕಳೊಂದಿಗೆ ವಾಸವಾಗಿದ್ದ ಎನ್ನಲಾಗಿದೆ.


ಸಂತೋಷ ನಾಯ್ಕ ಈತನನ್ನು ಕಾಣಲು ಬಂದಿದ್ದ ಸಹೋದರ ಮಾವ ಸೀತಾರಾಮ ನಾಗಪ್ಪ ನಾಯ್ಕ, ತನ್ನೂರು ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದ ಈ ವೇಳೆ ತನ್ನ ಮಾವನಿಗೆ ಬಸ್ ಹತ್ತಿಸಲು ಗುಳ್ಳಾಪುರದ ರಾಷ್ಟ್ರೀಯ ಹೆದ್ದಾರಿ ತನಕ ಬೈಕನಲ್ಲಿ ಡ್ರಾಪ್‍ಕೊಡಲು ಸಂತೋಷ ಮುಂದಾಗಿದ್ದ ಎನ್ನಲಾಗಿದೆ. ಸುರಿಯುತ್ತಿರುವ ಧಾರಾಕಾರ ಮಳೆ ಮತ್ತಿತರ ಕಾರಣಗಳಿಂದ ಅನಿರ್ವಾಯವಾಗಿ ಪ್ರಯಾಣ ಮೊಟಕುಗೊಳಿಸಿದ ಈ ಜೋಡಿ ಮರಳಿ ಕಲ್ಲೇಶ್ವರದ ಮನೆಗೆ ವಾಪಸ್ಸಾಗುತ್ತಿದ್ದರು ಎಂದು ತಿಳಿದುಬಂದಿದೆ. ದಾರಿಮಧ್ಯೆ ಗುಳ್ಳಾಪುರ ಸೇತುವೆ ದಾಟಿ ಮುಂದೆ ಹೋಗಬೇಕೆನ್ನುವಷ್ಟರಲ್ಲಿ, ಕಲ್ಲೇಶ್ವರ ಕ್ರಾಸ ಬಳಿ ರಸ್ತೆಗೆ ನುಗ್ಗುತ್ತದ್ದ ನೀರನ್ನು ಅಂದಾಜಿಸಲಾಗದೇ ಬೈಕ್ ಮುನ್ನಡೆಸಲು ಮುಂದಾದ ಸಂತೋಷ ನಾಯ್ಕ, ಆಯತಪ್ಪಿ ಪಕ್ಕಕ್ಕೆ ಬಿದ್ದು ಬೈಕ್ ಸಮೇತ ನೀರಿನಲ್ಲಿ ಕೊಚ್ಚಿಕೊಂಡು ಹೋಗಲಾರಂಭಿಸಿದ ಎನ್ನಲಾಗಿದ್ದು, ಕೂಡಲೇ ಆತನ ಮಾವ ಸಂತೋಷನನ್ನು ಮೇಲೆತ್ತಲು ಆತನ ಜಾಕೆಟ್ ಹಿಡಿದು ಎಳೆಯುವ ಪ್ರಯತ್ನ ನಡೆಸಿದ್ದನಾದರೂ ನೀರಿನ ರಭಸಕ್ಕೆ ಪ್ರಯತ್ನ ಫಲಕಾರಿಯಾಗಿಲ್ಲ ಎನ್ನಲಾಗಿದೆ.


ಸಂತೋಷನನ್ನು ರಕ್ಷಿಸುವ ಭರದಲ್ಲಿ ಮಾವನೇ ಅಪಾಯಕ್ಕೆ ಸಿಲುಕುವಂತಾಗಿ, ದೇವರ ದಯೆಯಿಂದಾಗಿ, ಸಾವರಿಸಿಕೊಂಡು ಮೇಲ್ಬರುವಂತಾಯಿತು ಎನ್ನುವುದು ಸ್ಥಳೀಯರ ಅನಿಸಿಕೆಯಾಗಿದೆ.
ಸಂತೋಷ ನಾಯ್ಕ ನೀರಲ್ಲಿ ಕೊಚ್ಚಿ ಹೋಗಿದ್ದು ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಸಿ.ಪಿ.ಐ ಕೃಷ್ಣಾನಂದ ನಾಯಕ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಸಂಪತ್ ಮತ್ತು ಸಿಬ್ಬಂದಿಗಳು ಹಾಗೂ ಸ್ಥಳೀಯರು ಕೊಚ್ಚಿಕೊಂಡು ಹೋಗಿ ಕಾಣೆಯಾದ ಸಂತೋಷ ನಾಯ್ಕನನ್ನು ಹುಡುಕುವ ಪ್ರಯತ್ನ ಮಾಡಿದರಾದರೂ, ನೀರಿನ ರಭಸದಿಂದ ಸಾಧ್ಯವಾಗಿಲ್ಲ ಎನ್ನಲಾಗಿದೆ.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version