Follow Us On

WhatsApp Group
Focus NewsImportant
Trending

ವಿದ್ಯುತ್ ಸ್ಥಗಿತದಿಂದ ಪರ್ಯಾಯ ವ್ಯವಸ್ಥೆ ಇಲ್ಲದೆ ಸಮಸ್ಯೆ: ವ್ಹೀಲ್‌ಚೇರ್‌ನಲ್ಲಿ ಮೇಲೆ ಹೊತ್ತುಕೊಂಡು ಮೊದಲ ಮಹಡಿಗೆ ಸಾಗಿದ ಕುಟುಂಬಸ್ಥರು

ಭಟ್ಕಳ: ವಿದ್ಯುತ್ ಸ್ಥಗಿತದಿಂದ ಪರ್ಯಾಯ ವ್ಯವಸ್ಥೆ ಇಲ್ಲದೆ ಅಂಗವಿಕಲ ಸಹೋದರ ಮತ್ತು ಸಹೋದರಿಯನ್ನು ವ್ಹೀಲ್‌ಚೇರ್‌ನಲ್ಲಿ ಮೇಲೆ ಹೊತ್ತುಕೊಂಡು ಮೊದಲ ಮಹಡಿಗೆ ಸಾಗಿಸಿದ ಘಟನೆ ಭಟ್ಕಳ ತಾಲೂಕಾ ಆಡಳಿತ ಸೌಧದಲ್ಲಿ ನಡೆದಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಣಾರ ಗ್ರಾಮದ ಗಾಳಿಕಟ್ಟೆಯಿಂದ ಭಟ್ಕಳ ಉಪನೋಂದಣಾಧಿಕಾರಿ ಕಚೇರಿಗೆ ಅಂಗವಿಕಲ ಸಹೋದರ ಮತ್ತು ಸಹೋದರಿ ಆಗಮಿಸಿದ್ದರು. ಉಪನೋಂದಣಾಧಿಕಾರಿ ಕಚೇರಿ ತಾಲೂಕು ಆಡಳಿತ ಸೌಧದ ಮೊದಲ ಮಹಡಿಯಲ್ಲಿದೆ. ವಿದ್ಯುತ್ ಕೈಕೊಟ್ಟಿದ್ದರಿಂದ ಲಿಫ್ಟ್ ಬಂದಾಗಿತ್ತು. ಪರ್ಯಾಯವಾಗಿ ಆಡಳಿತ ಸೌಧದಲ್ಲಿ ಜನರೇಟರ್ ಇಲ್ಲ. ಇದರಿಂದ ವ್ಹೀಲ್‌ಚೇರ್‌ನಲ್ಲಿ ಬಂದ ಇಬ್ಬರನ್ನು ಅವರ ಸಂಬoಧಿಕರು ಮೊದಲ ಮಹಡಿಗೆ ಹೊತ್ತುಕೊಂಡು ಹೋಗಿದ್ದಾರೆ. ಹೀಗೆ, ಸಾಗಿಸುವಾಗ ಏನಾದರೂ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ? ಕೂಡಲೇ ತಾಲೂಕು ಆಡಳಿತ ಸೌಧದಲ್ಲಿ ಜನರೇಟರ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button