ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಮೂರನೇ ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿಗಳನ್ನು ಇತ್ತೀಚಿಗೆ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯ ಭಟ್ಕಳದಲ್ಲಿ ಆಯೋಜಿಲಾಗಿತ್ತು. ಕುಮಟಾದ ಡಾ. ಎ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ತಂಡವು ಭಾಗವಹಿಸಿದ ಎಲ್ಲ ತಂಡಗಳನ್ನು ನೇರಸೆಟ್ಟುಗಳಿಂದ ಪರಾಭವಗೊಳಿಸಿ ಮೂರನೇ ವಲಯ ಚಾಂಪಿಯನ್ಶಿಪ್ ಅನ್ನು ತನ್ನ ಮುಡುಗೇರಿಸಿಕೊಂಡಿದೆ.
ವಿಸ್ಮಯ ನ್ಯೂಸ್, ಕುಮಟಾ