Follow Us On

WhatsApp Group
Focus News
Trending

ಮೊದಲ ಪ್ರಯತ್ನದಲ್ಲೇ ತನ್ನ ಗುರಿ ಸಾಧಿಸಿದ ಮರಾಠಿ ಸಮಾಜದ ಯುವಕ

ಹೊನ್ನಾವರ; ಮೊದಲ ಪ್ರಯತ್ನದಲ್ಲೇ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಸಿ.ಎ. ಪರೀಕ್ಷೆಯನ್ನು ತೇರ್ಗಡೆ ಹೊಂದಿದ್ದಾನೆ.  ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸಗೆರಿಯ ವಿಷ್ಣು ಮರಾಠಿ ಮತ್ತು ರಾಧಾ ಮರಾಠಿ ಅವರ ಮಗನಾದ ನಿತ್ಯಾನಂದ ವಿಷ್ಣು ಮರಾಠಿ ಈ ಸಾಧನೆ ಮಾಡಿದ ಛಲಗಾರ. ಕುಂಬ್ರಿ ಮರಾಠಿ ಸಮುದಾಯದ ಈತನು ಸಾಧಾರಣ ಸರ್ಕಾರಿ ಶಾಲಾ ಕಾಲೇಜಿನಲ್ಲಿ ಯಾವುದೇ ತರಬೇತಿ ಕೇಂದ್ರದ ಸಹಕಾರವಿಲ್ಲದೆ ಸ್ವ ಪ್ರಯತ್ನದಿಂದ ತನ್ನ ಪರೀಕ್ಷೆಯನ್ನು ಮುಗಿಸಿದ್ದಾನೆ.

CA G.S. Kamat and Co. ಯಲ್ಲಿ ಇಂಟರ್ನ್ಶಿಪ್ ಮುಗಿಸಿ ಅಲ್ಲಿಯೂ ತನ್ನ ಹೆಸರನ್ನು ಸಾಧಿಸಿದ್ದಾನೆ. ಸಿ.ಎ. ಆಗಬೇಕೆಂಬುದು ಹಲವಾರು ವಿದ್ಯಾರ್ಥಿಗಳ ಕನಸು. ಸಾಮಾನ್ಯ ಕೃಷಿ ಕುಟುಂಬದ ಈ ಛಲಗಾರ ತನ್ನ ಕನಸನ್ನು ನನಸು ಮಾಡುವಲ್ಲಿ ಸಫಲಾನಗಿದ್ದಾನೆ. ಇದರೊಂದಿಗೆ ತನ್ನ ಸಾಧನೆಯನ್ನು ಮನೆಯವರಿಗೆ, ಗುರುವೃಂದಕ್ಕೆ, ಸಮುದಾಯಕ್ಕೆ ಕೀರ್ತಿ ತಂದಿದ್ದಾನೆ.

ವಿಸ್ಮಯ ನ್ಯೂಸ್‌, ಹೊನ್ನಾವರ

Back to top button