ಹೊಟ್ಟೆ ನೋವಿನ ಔಷಧಿ ಎಂದು ಪೌಡರ್ ಸೇವಿಸಿ ವೃದ್ಧ ಸಾವು

ಅಂಕೋಲಾ: ಹೊಟ್ಟೆ ನೋವಿನ ಔಷಧಿ ಎಂದು ಯಾವುದೋ  ಪೌಡರ್ ಸೇವಿಸಿ ವ್ಯಕ್ತಿಯೋರ್ವರು ಮೃತ ಪಟ್ಟ ಘಟನೆ ತಾಲೂಕಿನ ಬೆಳಂಬಾರದ ತಾಳೇಬೈಲ್ ಬಳಿ ಸಂಭವಿಸಿದೆ.  ಬೆಳಂಬಾರ ತಾಳೇಬೈಲ್ ನಿವಾಸಿ ಇಂದ್ರ ಚೋಕಪ್ಪ ಗೌಡ (75) ಮೃತ ವ್ಯಕ್ತಿ ಯಾಗಿದ್ದು ಕಳೆದ ಕೆಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಇವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ತರಲಾಗಿತ್ತು . ಆದರೂ ಮತ್ತೆ ವಿಪರೀತ ಹೊಟ್ಟೆ ನೋವು ಕಂಡು ಬಂದಿದ್ದರಿಂದ ಔಷಧಿ ಎಂದು ಮನೆಯಲ್ಲಿ ಇದ್ದ ಯಾವುದೋ ಪೌಡರ್ ತಿಂದು ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥಗೊಂಡವರಿಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. 

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಊರಿನ ಹಿರಿಯರೋರ್ವರು ಈ ರೀತಿ ಮೃತಪಟ್ಟಿರುವುದಕ್ಕೆ ಗ್ರಾಮದ ಕೆಲ ನಾಗರಿಕರು ಬೇಸರ ವ್ಯಕ್ತ ಪಡಿಸಿ, ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version