Join Our

WhatsApp Group
Important
Trending

ಕೆಲಸಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಹೃದಯಾಘಾದಿಂದ ಬ್ಯಾಂಕ್ ಉದ್ಯೋಗಿ ಸಾವು

ಕುಮಟಾ: ಕೆಲಸಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಬ್ಯಾಂಕ್ ಉದ್ಯೋಗಿ ಹೃದಯಾಘಾದಿಂದ ಸಾವನ್ನಪ್ಪಿರುವ ಘಟನೆ ಬರ್ಗಿಯಲ್ಲಿ ನಡೆದಿದೆ. ಪ್ರಕಾಶ ಅರವಣಕರ್ (40) ಮೃತ ಬ್ಯಾಂಕ್ ನೌಕರರಾಗಿದ್ದು, ಇವರು ತಾಲೂಕಿನ ಅಳ್ವೇಕೋಡಿ ನಿವಾಸಿ ಎಂದು ತಿಳಿದುಬಂದಿದೆ. ಮೃತರು ಬರ್ಗಿ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ನಲ್ಲಿ ಕ್ಯಾಶಿಯರ್ ಆಗಿ, ಕೆಲಸ ಮಾಡುತ್ತಿದ್ದು, ಬೆಳಿಗ್ಗೆ ಎಂದಿನoತೆ ಮನೆಯಿಂದ ಕಚೇರಿಗೆ ಬರುತ್ತಿರುವಾಗ ಒಂದೆ ಸಮನೆ ಎದೆ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ಕಚೇರಿಗೆ ತಲುಪ ಬೇಕು ಎನ್ನುವಷ್ಟರಲ್ಲಿ ಎದೆ ನೋವು ಮತ್ತಷ್ಟು ಜಾಸ್ತಿ ಆಗಿದ್ದು, ತಕ್ಷಣ ಅವರನ್ನ ಖಾಸಗಿ ವಾಹನವೊಂದರಲ್ಲಿ ಕುಮಟಾ ಸರಕಾರಿ ಆಸ್ಪತ್ರೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

ವಿಸ್ಮಯ ನ್ಯೂಸ್, ಕುಮಟಾ

Back to top button