ಭಟ್ಕಳ: ಮುರುಡೇಶ್ವರ ನಾಕಾ ಬಳಿಯಲ್ಲಿರುವ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಮಲಗಿರುವ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯು ಸುಮಾರು 55 ರಿಂದ 60 ವರ್ಷದವನಾಗಿದ್ದು, ಎಲ್ಲಿಂದಲೋ ಬಂದು ಮುರುಡೇಶ್ವರ ನಾಕಾ ಬಳಿಯಲ್ಲಿರುವ ಬಸ್ ನಿಲ್ದಾಣದಲ್ಲಿ ಮಲಗಿರುವ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.
ಮೃತನು ಗೋಧಿ ಬಣ್ಣದವನಾಗಿದ್ದು, ತೆಳ್ಳನಯ ಮೈಕಟ್ಟು ಹೊಂದಿದ್ದು, ಮೀಸೆ ಮತ್ತು ದಾಡಿ ಬಿಟ್ಟಿರುತ್ತಾನೆ. ಬಳಿ ಬಣ್ಣದ ಬನಿಯನ್, ಕಪ್ಪು ಮತ್ತು ನೀಲಿ ಮಿಶ್ರಿತ ಚೌಕ ಗೆರೆಯುಳ್ಳ ಉದ್ದತೋಳಿನ ಫಾರ್ಮಲ್ ಶರ್ಟ್ ಮತ್ತು ನೀಲಿ, ಬಿಳಿ ಮತ್ತು ಕಪ್ಪು ಬಣ್ಣ ಮಿಶ್ರಿತ ಲುಂಗಿ ಧರಿಸಿದ್ದಾನೆ. ಮೃತನ ಸಾವಿಗೆ ನಿಖರವಾದ ಕಾರಣ ಇದುವರೆಗೆ ತಿಳಿದು ಬಂದಿಲ್ಲವಾಗಿದೆ. ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ