ಮಕ್ಕಳ ಉದ್ಯಾನವನದ ಕಂಪೌಂಡ್ ಗೋಡೆ ಕುಸಿತ: ಮತ್ತಷ್ಟು ಕುಸಿಯದಂತೆ ಮುನ್ನೆಚ್ಚರಿಕೆಯೂ ಅಗತ್ಯ
ಐತಿಹಾಸಿಕ ಖ್ಯಾತಿಯ ಉದ್ಯಾನವನಕ್ಕೆ ಬೇಕಿದೆ ಅಭಿವೃದ್ಧಿಯ ಕಾಯಕಲ್ಪ

ಅಂಕೋಲಾ: ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ,ಹಲವು ಅವಾಂತರಗಳನ್ನು ಸೃಷ್ಟಿಸುತ್ತಿದೆ.ಇದೇ ವೇಳೆ ಪಟ್ಟಣದ ಬಸ್ ಸ್ಟ್ಯಾಂಡ್ ಎದುರಿನಿಂದ ಕುಮಟಾ ಕಡೆ ಸಾಗುವ ದಿನಕರ ದೇಸಾಯಿ ಮಾರ್ಗದಂಚಿಗೆ (ಪೆಟ್ರೋಲ್ ಪಂಪ ಹತ್ತಿರ) ಐತಿಹಾಸಿಕ ಖ್ಯಾತಿ ಹೊಂದಿರುವ, ಗಾಂಧಿ ಮೈದಾನದ ಸತ್ಯಾಗ್ರಹ ಸ್ಮಾರಕ ಭವನದ ಆವರಣದಲ್ಲಿರುವ ಮಕ್ಕಳ ಉದ್ಯಾನವನದ ಕಂಪೌಂಡ್ ಗೋಡೆ ಕುಸಿದು ಬಿದ್ದಿದೆ.
ಗೋಡೆಯ ಕಲ್ಲುಗಳು,ಕುಸಿದ ಮಣ್ಣಿನಿಂದಾಗಿ ರಸ್ತೆ ಅಂಚಿನ ಗಟಾರದಲ್ಲಿ ಮಳೆ ನೀರು ಹರಿವಿಗೆ ತೊಡಕಾಗುವ ಸಾಧ್ಯತೆ ಇದ್ದು,ಕಾಂಪೌಂಡ್ ಗೋಡೆ ಮತ್ತಷ್ಟು ಕುಸಿಯುವ ಮುನ್ನ, ಸಂಭಧಿಸಿದ ಇಲಾಖೆ ಹಾಗೂ ಅಧಿಕಾರಿಗಳು ಎಚ್ಚೆತ್ತು,,ಬಿದ್ದ ಗೋಡೆಯ ಅವಶೇಷಗಳನ್ನು ಮೇಲೆತ್ತಿಸಿ,ಪಕ್ಕಕ್ಕೆ ಇಟ್ಟು,ಮಳೆಯ ಪ್ರಮಾಣ ಕಡಿಮೆಯಾದೊಡನೆ ಹೊಸ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಮಕ್ಕಳು ಹಾಗೂ ಸಾರ್ವಜನಿಕರು, ಇತರೆ ವಾಹನಗಳು ಹೆಚ್ಚಾಗಿ ಓಡಾಡದಿರುವ ರಾತ್ರಿಯ ವೇಳೆ ಕಂಪೌಂಡ್ ಗೋಡೆ ಕುಸಿದಿರುವುದರಿಂದ ಸಂಭವನೀಯ ಅಪಾಯ ತಪ್ಪಿದಂತಾಗಿದೆ ಎಂದು ಕೆಲ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಆರೋಗ್ಯ ಮತ್ತು ಕ್ರೀಡೆ ಮತ್ತು ಬೌಧ್ಧಿಕ ಉತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ರೋಟರಿ ಕ್ಲಬ್ ನವರು,ಮಕ್ಕಳ ಉದ್ಯಾನವನದ ಅಭಿವೃದ್ಧಿಗೆ ಆಸಕ್ತಿ ವಹಿಸಿ,ಕೆಲ ಪ್ರಮಾಣದ ಪ್ರಾಯೋಕತ್ವ ನೆರವು ವಹಿಸಿದ್ದರು. ಇದೀಗ ಪ್ರತಿಷ್ಠಿತ ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳ ಲಿರುವ ಹೆಸರಾಂತ ನ್ಯಾಯವಾದಿ,ವಕೀಲರ ಸಂಘದ ಅಧ್ಯಕ್ಷ, ವಿನೋದ್ ಶಾನಭಾಗ ನೇತೃತ್ವದ ಹೊಸ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು,ಈ ಬಾರಿಯೂ ವಿಶೇಷ ಪ್ರಾಯೋಜಕತ್ವ ವಹಿಸಿಕೊಂಡು, ಉದ್ಯಾನವನದ ಅಭಿವೃದ್ಧಿಗೆ ಕೈಜೋಡಿಸಿ ಪಟ್ಟಣದ ಸುಂದರಂತೆ ಹೆಚ್ಚಳಕ್ಕೆ ಕಾರಣೀಕರ್ತರಾಗಬೇಕಿದೆ ಎನ್ನುವುದು ಪ್ರಜ್ಞಾವಂತರ ಅನಿಸಿಕೆ ಆಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ