Important
Trending

ಮಳೆ ಆರ್ಭಟ: ಉತ್ತರಕನ್ನಡದ ಹಲವು ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಮುಂದುವರಿಕೆ

ಕಾರವಾರ: ಉತ್ತರಕನ್ನಡದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಹೀಗಾಗಿ ಕೆಲ ಶಾಲಾ‌ಕಾಲೇಜುಗಳಿಗೆ ರಜೆ ಮುಂದುವರಿಸಲಾಗಿದೆ. ಕಾರವಾರ, ಜೋಯಿಡಾ, ಹಳಿಯಾಳ , ದಾಂಡೇಲಿ, ಹೊನ್ನಾವರ ತಾಲೂಕುಗಳಲ್ಲಿ ನಾಳೆ ( ಜುಲೈ 26 ರಂದು) ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ, ಉಳಿದ ತಾಲೂಕುಗಳಲ್ಲಿ ಸ್ಥಳೀಯ ಪರಿಸ್ಥಿತಿ ಅವಲೋಕಿಸಿ, ರಜೆಯ ನಿರ್ಧಾರ ಕೈಗೊಳ್ಳಲು ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ. ಕುಮಟಾ, ಅಂಕೋಲಾದಲ್ಲಿ ಮಳೆಯ ಪರಿಸ್ಥಿತಿ ಅವಲೋಕಿಸಲಾಗುತ್ತಿದ್ದು, ಶೀಘ್ರವೇ ನಿರ್ಧಾರ ಪ್ರಕಟಿಸುವುದಾಗಿ ಅಧಿಕಾರಿಗಳು ವಿಸ್ಮಯ ಟಿ.ವಿಗೆ ಮಾಹಿತಿ ನೀಡಿದ್ದಾರೆ.

ಹೊನ್ನಾವರ: ತಾಲೂಕಿನಲ್ಲಿ ಮಳೆ ಜೋರಾಗಿ ಬೀಳುತ್ತಿರುವುದರಿಂದ ಹಾಗೂ ಕೆಲವು ಪ್ರದೇಶಗಳಲ್ಲಿ ನೀರು ತುಂಬಿರುವುದರಿಂದ ಸಹಾಯಕ ಆಯುಕ್ತರ ನಿರ್ದೇಶನದ ಮೇರೆಗೆ ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚರ್ಚಿಸಿ ನಾಳೆ ದಿನಾಂಕ -26-07-2023 ರಂದು ಸಹ ತಾಲೂಕಿನ ಎಲ್ಲ ಅಂಗನವಾಡಿ, 1-12 ನೆ ತರಗತಿಗಳಿಗೆ ರಜೆ ಮುಂದುವರಿಸಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Back to top button