ಕುಮಟಾ: ಓರಿಸ್ಸಾದ ರಾಯಘಡದ ಮಲ್ಲಿಜರಣ ಎಂಬಲ್ಲಿಯ ಸೆಂಟರ್ ಆಫ್ ಎಕ್ಸ್ ಲೆನ್ಸ್ ಪಾರ್ ಟ್ರೈಬಲ್ ಅಗ್ರಿಕಲ್ಚರ್ & ರಿಸರ್ಚ್ ಸಂಸ್ಥೆ ನಡೆಸುವ ಹಲಸು ಕೃಷಿ ಮತ್ತು ಕಸಿ ತರಬೇತುದಾರರಾಗಿ ಕುಮಟಾ ತಾಲೂಕಿನ ಬರಗದ್ದೆಯ ಪ್ರದೀಪ್ ಕುಮಾರ್ ಹೆಗಡೆ ಮತ್ತು ಮಾಧವ್ ಹೆಗಡೆ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿದರು. ಸುಮಾರು ಮೂವತ್ತಕ್ಕೂ ಹೆಚ್ಚು ಗುಡ್ಡಗಾಡು ಜನರು ಇದರ ಸದುಪಯೋಗ ಪಡೆದುಕೊಂಡರು. ಈ ಸಂಸ್ಥೆಯು ಹಲವಾರು ವರ್ಷದಿಂದ ರೈತರ ಏಳ್ಗೆಗೆ ಶ್ರಮಿಸುತ್ತಿದ್ದು, ಅಚ್ಯುತ್ ದಾಸ್ ಅವರು ಇದರ ನಿರ್ದೇಶಕರಾಗಿ ಸಂಸ್ಥೆಯ ಏಳಿಗೆಗೆ ಶ್ರಮಿಸುತ್ತಿದ್ದಾರೆ.
ಪ್ರದೀಪಕುಮಾರ್ ಹೆಗಡೆ ಇವರು ಮೂಲತಃ ಕೃಷಿಕರಾಗಿದ್ದು, ತಮ್ಮ ತೋಟದಲ್ಲಿ ಬಾಳೆ, ತೆಂಗು, ಅಡಿಕೆ, ಕಾಳುಮೆಣಸು, ಕೊಕೊ ಬೆಳೆಯುತ್ತಿದ್ದು, ಕಸಿಯಲ್ಲೂ ವಿಶೇಷ ಪರಿಣಿತಿ ಹೊಂದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸoಪರ್ಕ ಸಂಖ್ಯೆ :- 9449339966.
ವಿಸ್ಮಯ ನ್ಯೂಸ್, ಕುಮಟಾ