Important
Trending

ನದಿ ಸಂಗಮ ತೀರ ಪ್ರದೇಶಗಳಲ್ಲಿ ಕಣ್ಮರೆಯಾದ ಮರಳು ದಿಬ್ಬ

ಹಾಸಿದಂತಾದ ಕಟ್ಟಿಗೆ ರಾಶಿ
ಅಂಕೋಲಾ ತಾಲೂಕಿನ ಮಂಜಗುಣಿಯಲ್ಲಿ ಅಪರೂಪದ ದೃಶ್ಯ
ಪ್ರಕೃತಿ ವಿಸ್ಮಯ !

[sliders_pack id=”3491″]

ಅಂಕೋಲಾ : ನದಿ-ಸಮುದ್ರ ಸಂಗಮ ತೀರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರಬೇಕಿದ್ದ ಮರಳಿನ ದಿಬ್ಬಗಳೇ ಕಣ್ಮರೆಯಾದಂತಿದ್ದು, ಎಲ್ಲಿ ನೋಡಿದರಲ್ಲಿ ಕಟ್ಟಿಗೆಗಳ ರಾಶಿ ರಾಶಿಯನ್ನೇ ಹಾಸಿದಂತ ಅಪರೂಪದ ದೃಶ್ಯಾವಳಿ ತಾಲೂಕಿನ ಮಂಜಗುಣಿ ಸುತ್ತ-ಮುತ್ತಲಿನ ಸಮುದ್ರ ಕಿನಾರೆ ಪ್ರದೇಶ ಮತ್ತು ಗಂಗಾವಳಿ ನದಿ ತೀರದಲ್ಲಿ ಕಂಡುಬರುತ್ತಿದ್ದು, ಪ್ರಕೃತಿಯ ‘ವಿಸ್ಮಯ’ವೋ ಎಂಬಂತೆ ಗೋಚರಿಸುತ್ತಿದೆ.

ಬಹು ದೂರದಿ ಹುಟ್ಟಿ ಅರಭ್ಬೀ ಸಮುದ್ರ ಸೇರುವ ವರೆಗೆ ಗಂಗಾವಳಿ ನದಿಯು, ದಾರಿ ಮಧ್ಯೆ ಹಲವು ಬೆಟ್ಟ ಗುಡ್ಡಗಳನ್ನು ಸೀಳಿಕೊಂಡು ಅರಣ್ಯ ಪ್ರದೇಶದಿಂದ ಮುನ್ನುಗ್ಗುತ್ತದೆ. ಕಳೆದ ಕೆಲ ದಿನಗಳಿಂದ ಘಟ್ಟದ ಮೇಲಿನ ತಾಲೂಕು ಸಹಿತ ನದಿ ಹತ್ತಿರದ ಎಲ್ಲಾ ಪ್ರದೇಶಗಳಲ್ಲಿ ಧಾರಕಾರವಾಗಿ ಮಳೆ ಸುರಿದ ಪರಿಣಾಮ ನೀರಿನ ಹರಿವು ಹೆಚ್ಚಿದ್ದು ವೇಗವು ಇಮ್ಮಡಿಸಿದೆ. ಪ್ರವಾಹದೋಪದಿಯಲ್ಲಿ ಹರಿದು ಬರುತ್ತಿರುವ ನದಿಯು ತನ್ನ ಒಡಲಲ್ಲಿ ಮರ-ದಿಮ್ಮೆ-ಕಟ್ಟಿಗೆ ರಾಶಿಗಳನ್ನೇ ಹೊತ್ತು ತರುತ್ತಿದ್ದು ಸಮುದ್ರ ಸಂಗಮ ಪ್ರದೇಶದಲ್ಲಿ ಅಲೆಗಳ ಹೊಡತಕ್ಕೆ ಸಿಲುಕಿ, ನದಿಯಲ್ಲಿ ತೇಲಿ ಬಂದ ಕಟ್ಟಿಗೆಗಳೆಲ್ಲವೂ ಪಕ್ಕದಂಚಿನ ತೀರ ಪ್ರದೇಶಗಳಲ್ಲಿ ರಾಶಿ ರಾಶಿಯಾಗಿ ಸಂಗ್ರಹವಾಗುತ್ತಿದೆ.

ಕಳೆದ 2-3 ದಶಕಗಳಲ್ಲಿಯೇ ಇಷ್ಟೊಂದು ಭಾರಿ ಪ್ರಮಾಣದ ಕಟ್ಟಿಗೆಗಳ ರಾಶಿ ರಾಶಿ ತೇಲಿ ಬಂದಿರುವದನ್ನು ನಾವು ಕಂಡಿಲ್ಲ ಎನ್ನುವುದು ಕೆಲ ಸ್ಥಳೀಯರ ಅನಿಸಿಕೆಯಾಗಿದೆ. ಇನ್ನು ಕೆಲವರ ಪ್ರಕಾರ ಅರಣ್ಯ ಪ್ರದೇಶಗಳಲ್ಲಿ ಕಟಾವು ಮಾಡಿಟ್ಟ ಕೆಲ ಪ್ರಮಾಣದ ಕಟ್ಟಿಗೆಗಳು ನೀರಿನ ರಭಸಕ್ಕೆ ತೇಲಿ ಬಂದಿರುವ ಸಾಧ್ಯತೆಗಳು ಇವೆ ಎಂಬ ಮಾತುಗಳು ಕೇಳಿ ಬಂದಿವೆ.

ಅವೇನಿದ್ದರೂ ಸಹ ರಾಶಿ ರಾಶಿಯಾಗಿ ತೇಲಿ ಬಂದ ಸುದ್ದಿ ಜನರ ಕುತೂಹಲಕ್ಕೆ ಕಾರಣವಾಗಿದ್ದಲ್ಲದೇ, ಅವರಲ್ಲಿಯೇ ಕೆಲವರು ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿ ತಮ್ಮ ಮನೆ ಬಳಕೆಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಕಟ್ಟಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ. ಕೆವಲ ಸ್ಥಳೀಯರಷ್ಟೇ ಅಲ್ಲದೆ ಸುದ್ದಿ ತಿಳಿದ ಅಕ್ಕ-ಪಕ್ಕದ ಗ್ರಾಮಸ್ಥರು ಮತ್ತಿತರ ದೂರದೂರಿನ ಜನರು ಬಂದು ಕಟ್ಟಿಗೆ ಸಂಗ್ರಹಿಸಿ ವಾಹನಗಳ ಮೂಲಕವೂ ಸಾಗಿಸಿದ್ದಾರೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button