ಕಾರವಾರ: ಜನರೊoದಿಗೆ ಉತ್ತಮ ಸಂಪರ್ಕ ಹೊಂದಿದ್ದ ಹಂದಿಯೊoದನ್ನು ನಾಡಬಾಂಬ್ ಇಟ್ಟು ಹತ್ಯೆ ಮಾಡಿರುವ ಘಟನೆ ಕಾರವಾರ ತಾಲ್ಲೂಕಿನ ಚೆಂಡಿಯಾ ಗ್ರಾಮದಲ್ಲಿ ನಡೆದಿದೆ. ಇದೀಗ ಇದೇ ಪ್ರದೇಶದಲ್ಲಿ ಪೊಲೀಸರು ಮತ್ತೊಂದು ಸಜೀವ ಬಾಂಬ್ ಪತ್ತೆ ಮಾಡಿದ್ದು, ಮಂಗಳೂರಿನಿoದ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆ ನಡೆಸಿದೆ.
ತಾಲೂಕಿನ ಚೆಂಡಿಯಾದ ಸ್ಮಶಾನದ ಬಳಿ ಆ.4 ರಂದು ನಾಡಬಾಂಬ್ ಸ್ಪೋಟವಾಗಿ ಹಂದಿಯೊoದು ಮೃತಪಟ್ಟಿತ್ತು. ಗ್ರಾಮಸ್ಥರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಹಂದಿ ಸಾವಿನಿಂದ ಗ್ರಾಮಸ್ಥರು ತೀವ್ರ ದುಖಃಕ್ಕೆ ಒಳಗಾಗಿದ್ದರು. ತಕ್ಷಣ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು. ಪ್ರಕರಣಕ್ಕೆ ಸಂಬoಧಿಸಿದoತೆ ಅರಣ್ಯ ಇಲಾಖೆ ಅಧಿಕಾರಿಗಳು ಸೀಫ್ರನ್ ಥಾಮಸ್ ಫರ್ನಾಂಡಿಸ್ ಎಂಬುವವರನ್ನು ಬಂಧಿಸಿದ್ದರು.
ಇನ್ನು ನಾಡ ಬಾಂಬ್ ಸ್ಪೋಟವಾದ ಪ್ರದೇಶದಲ್ಲಿಯೇ ಮತ್ತೊಂದು ನಾಡಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಮಂಗಳೂರಿನಿoದ ಪೊಲೀಸರು ಬ್ಯಾರಿಕೆಡ್ ಹಾಕಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಇದೀಗ ಮಂಗಳೂರಿನಿoದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಒಂದು ವರ್ಷದಿಂದ ಕಾಡು ಹಂದಿಗಳ ಗುಂಪು ಜನ ವಸತಿ ಪ್ರದೆಶಗಳಿಗೆ ಬರುವುದನ್ನು ಚೆಂಡಿಯಾ ಗ್ರಾಮದ ಜನರು ಗಮನಿಸಿದ್ದರು. ಬಳಿಕ ಅದರಲ್ಲಿ ಒಂದು ಹಂದಿ ಜನರ ಸಂಪರ್ಕದಲ್ಲಿಯೇ ಇರುವುದರಿಂದ ಹಂದಿಗೆ ಹಣ್ಣು, ತರಕಾರಿ ಸೇರಿದಂತೆ ಆಹಾರ ನೀಡುತ್ತಿದ್ದರು. ಕಾಡು ಹಂದಿಯೂ ಜನರಿಗೆ ತೊಂದರೆ ಕೊಡದೇ ರಾತ್ರಿವೇಳೆ ಬಂದು ಆಹಾರ ತಿಂದು ಹೋಗುತ್ತಿತ್ತು. ಒಮ್ಮೊಮ್ಮೆ ಹಗಲಿವ ವೇಳೆಯಲ್ಲಿಯೂ ಬರುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ