Focus News
Trending

ಎರಡನೇಯ ಮುನ್ನೆಚ್ಚರಿಕೆ: ಈ ಭಾಗದಲ್ಲಿ ಮಳೆ ಇಲ್ಲದಿದ್ದರೂ ಶರಾವತಿ ನದಿ ತೀರದ ಜನರಲ್ಲಿ ಆತಂಕ: ಯಾವುದೇ ಕ್ಷಣದಲ್ಲಿ ನೀರು ಬಿಡುವ ಸೂಚನೆ

ದೋಣಿ ಸಂಚಾರ, ಮೀನುಗಾರಿಗೆ, ಇತರೆ ಚಟುವಟಿಕೆ ನಡೆಸದಂತೆ ತಾಕೀತು

ಹೊನ್ನಾವರ: ಶರಾವತಿ ನದಿ ತಿರದ ಎಡ ಮತ್ತು ಬಲದಂಡೆಯ ನಿವಾಸಿಗಳಿಗೆ ಪ್ರವಾಹದ ಎರಡನೇಯ ಮುನ್ನೆಚ್ಚರಿಕೆಯ ಸೂಚನೆ ರವಾನಿಸಲಾಗಿದೆ. ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನೀರು ವ್ಯಾಪಕವಾಗಿ ಹರಿದು ಬರುತಿರುವುದರಿಂದ ಜಲಾಶಯದ ಹಿತದೃಷ್ಟಿಯಿಂದ ಯಾವ ಸಮಯದಲ್ಲಿ ಬೇಕಾದರು ನೀರನ್ನು ಹೊರಬಿಡಲಾಗುವುದು ಎಂದು ಮುನ್ನೆಚರಿಕೆಯ ಸೂಚನಾ ಪತ್ರ ನೀಡಲಾಗಿದೆ.

ಈಗಾಗಲೇ ಲಿಂಗನಮಕ್ಕಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1,819 ಮೀಟರ್ ಆಗಿದ್ದು, ಸದ್ಯ 1806.20 ಮೀಟರ್ ತುಂಬಿದೆ. ಒಳಹರಿವಿನ ಪ್ರಮಾಣ ಹೆಚ್ಚಿದ್ದು, ಇದು ಹೀಗೆ ಮುಂದುವರಿದರೆ, ಅಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಯಾವುದೇ ಸಮಯದಲ್ಲಿ ಹೊರ ಬಿಡಲಾಗುತ್ತದೆ ಎಂದು ಸೂಚನಾ ಪತ್ರದಲ್ಲಿ ಮಾಹಿತಿ ನೀಡಲಾಗಿದೆ.

ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಟ್ಟಲ್ಲಿ ಗೇರುಸೋಪ್ಪಾ ಜಲಾಶಯದ ಹಿತದೃಷ್ಟಿಯಿಂದ ಲಿಂಗನಮಕ್ಕಿ ಜಲಾಶಯದಿಂದ ಹೊರಬಿಟ್ಟ ನೀರಿನ ಪ್ರಮಾಣದಷ್ಟು ನೀರನ್ನು ಹೊರಬಿಡಲಾಗುತ್ತದೆ. ಹೀಗಾಗಿ ಶರಾವತಿ ನದಿ ತೀರದಲ್ಲಿ ದೋಣಿ ಸಂಚಾರ, ಮೀನುಗಾರಿಗೆ ಹಾಗು ಇತರೆ ಚಟುವಟಿಕೆಗಳನ್ನು ನಡೆಸಬಾರದು. ನದಿಯ ದಡದಲ್ಲಿ ವಾಸಿಗಳು ಜನರು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು ಎಂದು ಮಾಹಿತಿ ನೀಡಲಾಗಿದೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್, ಹೊನ್ನಾವರ

Back to top button