Important
Trending

ಹೆತ್ತ ತಾಯಿ ತನ್ನಿಂದ ಬೇರೆಯಾದ ಹಿನ್ನಲೆ: ಮನನೊಂದು ಮಗ ಸಾವಿಗೆ ಶರಣು

ಕುಮಟಾ: ಹೆತ್ತ ತಾಯಿ ತನ್ನಿಂದ ದೂರವಾಗಿ ಮನೆಯಲ್ಲಿಯೇ ಬೇರೆ ಕೋಣೆಯಲ್ಲಿ ವಾಸ್ತವ್ಯವಿದ್ದು, ದಿನಕಳೆಯುತ್ತಿರುವ ವಿಚಾರವನ್ನೇ ಮನಸ್ಸಿಗೆ ಹಚ್ಚಿಕೊಂಡು ಮಗನು ಆತ್ಮಹತ್ಯೆಗೆ ಶರಣಾದ ಘಟನೆ ಕುಮಟಾ ತಾಲೂಕಿನ ಕಾಗಲ್‌ದ ಅಂಗಡಿಕೇರಿಯಲ್ಲಿ ನಡೆದಿದೆ. ಕಾಗಲ್ ಅಂಗಡಿಕೇರಿಯ ನಿವಾಸಿ ಮಂಜುನಾಥ ಮಾಧವ ನಾಯ್ಕ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಪಂಚಾಯತ್ ಸಮೀಪ ಹೋಗಿ ಬರುವುದಾಗಿ ಮನೆಯಿಂದ ಹೊರಹೊಗಿದ್ದ ಮಂಜುನಾಥ ಕಾಗಲ್ ಗ್ರಾಮ ಪಂಚಾಯತ್ ಹತ್ತಿರದ ಖಾಸಗಿ ವ್ಯಕ್ತಿಯೋರ್ವರ ಬೆಟ್ಟದ ಜಮೀನಿನಲ್ಲಿ ಗೇರು ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಈ ಕುರಿತಾಗಿ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ ಕುಮಟಾ

Back to top button