Bag Snatching:ಮೂತ್ರಕ್ಕೆ ತೆರಳಿದ ವೇಳೆ ವ್ಯಕ್ತಿಯ ಕೈನಲ್ಲಿದ್ದ ಹಣದಬ್ಯಾಗ ಕಿತ್ತು ಎಸ್ಕೇಪ್

24 ಗಂಟೆಯಲ್ಲೇ ಆರೋಪಿಯ ಬಂಧನ

ಕಾರವಾರ: ರಾಷ್ಟ್ರೀಯ ಹೆದ್ದಾರಿಯ ಪಕ್ಕ ಮೂತ್ರಕ್ಕೆ ತೆರಳಿದ ವೇಳೆ ವ್ಯಕ್ತಿಯೊಬ್ಬನ ಕೈನಲ್ಲಿದ್ದ ಹಣದ ಬ್ಯಾಗನ್ನ (Bag Snatching) ಕಿತ್ತು ಪರಾರಿಯಾಗಿದ್ದ ಆರೋಪಿಯನ್ನ ಪೊಲೀಸರು 24 ಗಂಟೆಯಲ್ಲಿ ಬಂಧಿಸಿದ್ದಾರೆ. ನಾಸೀರ್ ಹುಸೇನ್ ಎಂಬಾತ ರಾಷ್ಟ್ರೀಯ ಹೆದ್ದಾರಿಯ ಮೀನುಮಾರುಕಟ್ಟೆ ಸಮೀಪ ಎದುರು ಮೂತ್ರಕ್ಕೆ ತೆರಳುವಾಗ ಅಪರಿಚಿತ ವ್ಯಕ್ತಿಯೋರ್ವ ಆಗಮಿಸಿ ಕೈಯಲ್ಲಿದ್ದ ಬ್ಯಾಗ್ ಕಸಿದು ಪರಾರಿಯಾಗಿದ್ದ.

Post Office Recruitment 2023: ಬೃಹತ್ ನೇಮಕಾತಿ: 1,714 ಹುದ್ದೆಗಳು: SSLC ಆದವರು ಅರ್ಜಿ ಸಲ್ಲಿಸಬಹುದು

ಕೂಡಲೇ ಇನ್ನೊಂದು ಬೈಕಿನಲ್ಲಿ ತೆರಳಿ ಆರೋಪಿಗಾಗಿ ಹುಡುಕಾಟ ನಡೆಸಿದರೂ ಆತ ಪತ್ತೆಯಾಗದೇ ಇದ್ದಾಗ, ಪೊಲೀಸರಿಗೆ ದೂರು ನೀಡಿದ್ದರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ನಗರದ ಕೋಣೆನಾಲಾದ ಹಜರತ್ ಅಲಿ ಎನ್ನುವವನ್ನ ಬಂಧಿಸಿ ಬ್ಯಾಗ್ ಮತ್ತು ಹಣವನ್ನ ವಶಪಡಿಸಿಕೊಂಡಿದೆ. ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version