ತೀರಾ ಅಪಾಯಕಾರಿ ಸ್ಥಳಗಳನ್ನು ಪಟ್ಟಿ ಮಾಡಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್
ಸಿದ್ದಾಪುರ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಮನೆ, ಜಾನುವಾರು ಮತ್ತಿತರ ಪ್ರಕರಣಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಅದೇ ರೀತಿ ವಿವಿಧ ಇಲಾಖೆಗಳ ವರದಿಯನ್ವಯ ಭೂಕುಸಿತ ಉಂಟಾಗಬಹುದಾದ 439 ಗುರುತಿಸಲಾಗಿದೆ. ತೀರಾ ಅಪಾಯಕಾರಿ ಸ್ಥಳಗಳನ್ನು ಪಟ್ಟಿ ಮಾಡಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು. ಅವರು ಸಿದ್ದಾಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಬಹುದಾದ 439 ಪ್ರದೇಶಗಳನ್ನು ಗುರುತಿಸಿದ್ದು 15 ಸೂಕ್ಷ್ಮ ಸ್ಥಳಗಳ ಪಟ್ಟಿ ಮಾಡಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ,
ಕಂದಾಯ ಇಲಾಖೆಯಿಂದ ಹೊಸ ಅಂಗನವಾಡಿಗೆ ಜಾಗ ಮಂಜೂರಿ ಮಾಡುತ್ತಿದ್ದೇವೆ. ಸಿದ್ದಾಪುರದಲ್ಲಿ ಮುಖ್ಯ ರಸ್ತೆ ಅಗಲೀಕರಣಕ್ಕೆ ಸಂಬAಧಿಸಿ 59 ಫಲಾನುಭವಿಗಳ ದೂರು-ದುಮ್ಮಾನ ಆಲಿಸಲಾಗಿದ್ದು, 10 ದಿನಗಳ ನಂತರ ಮತ್ತೊಮ್ಮೆ ಸಭೆ ನಡೆಸಿ ದರ ನಿಗದಿಗೊಳಿಸಲಾಗುವುದು ಎಂದ ಅವರು, ಆರ್.ಟಿ.ಸಿಯಲ್ಲಿ ಕರ್ನಾಟಕ ಸರ್ಕಾರ ಇರುವ ಪ್ರಕರಣಗಳು ಹೆಚ್ಚಿರುವ ಮಾಹಿತಿ ಬಂದಿದ್ದು, ಹಂತ ಹಂತವಾಗಿ ಇತ್ಯರ್ಥಗೊಳಿಸಲಾಗುವುದು ಎಂದರು. ಈ ವೇಳೆ ಶಿರಸಿ ಉಪವಿಭಾಗಾಧಿಕಾರಿ ದೇವರಾಜ ಆರ್ ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ಸಿದ್ದಾಪುರ