ಶಕ್ತಿ ಯೋಜನೆ ಅನುಷ್ಠಾನದಲ್ಲಿ ಕಾರ್ಮಿಕ ಸಿಬ್ಬಂದಿಯ ಪರಿಶ್ರಮ : ವಿಭಾಗೀಯ ಪುರಸ್ಕಾರಕ್ಕೊಳಗಾದ ಸಾರಿಗೆ ಸಿಬ್ಬಂದಿಗೆ ಗೌರವ
ಅಂಕೋಲಾ: ರಾಜ್ಯ ಸರಕಾರದ 5 ಮಹಾತ್ವಾಕಾಂಕ್ಷಿ ( ಗ್ಯಾರಂಟಿ) ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯನ್ನು (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ) ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ಮಾದರಿಯಾದ ಅಂಕೋಲಾ ಸಾರಿಗೆ ಘಟಕದ ಕುಶಲಕರ್ಮಿ ಸಿಬ್ಬಂದಿ ಸುಬ್ರಹ್ಮಣ್ಯ ಆರ್ ಬಂಟ ಅವರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶಿರಸಿ ವಿಭಾಗದ ವತಿಯಿಂದ ಉತ್ತಮ ಸಿಬ್ಬಂದಿ ಎಂದು ಪ್ರಶಂಸಿಸಿ ಪುರಸ್ಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಬೇಳಾ ಬಂದರಿನ ಪ್ರಮುಖರು ಅಂಕೋಲಾ ಸಾರಿಗೆ ಘಟಕಕ್ಕೆ ಆಗಮಿಸಿ ಸುಬ್ರಹಣ್ಯ ಅವರನ್ನು ಸನ್ಮಾನಿಸಿ ಗೌರವಿಸಿದರು.
ಬೇಳಾ ಬಂದರಿನ ಪ್ರಮುಖರು ಮತ್ತು ನ್ಯಾಯವಾದಿಯಾಗಿರುವ ಉಮೇಶ ನಾಯ್ಕ ಮಾತನಾಡಿ ಸುಬ್ರಹ್ಮಣ್ಯ ಬಂಟ ಓರ್ವ ಉತ್ತಮ ವ್ಯಕ್ತಿ. ಮೂಲತಃ ಬೇಳಾ ಬಂದರಿನವರಾದ ಇವರು ಹಾಲಿ ಅಂಬಾರಕೊಡ್ಲದ ನಿವಾಸಿಯಾಗಿದ್ದು, ಬಹಳ ಸರಳ ಸೌಮ್ಯ ಸ್ವಭಾವದ ವ್ಯಕ್ತಿ. ಇಲಾಖೆಯಲ್ಲಿ ಎಲ್ಲರೊಂದಿಗೆ ಸರಳತೆಯಿಂದ ಬೆರೆತು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ, ಶ್ರಮಜೀವಿ ಆದ ಇವರಿಗೆ ಪ್ರಶಸ್ತಿ ಲಭಿಸಿರುವದು ಹುಟ್ಟೂರು ಬೇಳಾಬಂದರಿಗೆ ಹೆಮ್ಮೆ ತಂದಿದೆ ಎಂದರು. ತಾ.ಪಂ.ಸ್ಥಾಯೀ ಸಮಿತಿಯ ಮಾಜಿ ಅಧ್ಯಕ್ಷ ಮಂಜುನಾಥ ಡಿ ನಾಯ್ಕ ಮಾತನಾಡಿ ಸುಬ್ರಹ್ಮಣ್ಯ ಬಂಟ ಅವರಿಗೆ ಪ್ರಶಸ್ತಿ ಲಭಿಸಿರುವದು ಅತ್ಯಂತ ಖುಷಿ ತಂದಿದೆ. ಅವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿ ಪುರಸ್ಕಾರಗಳು ಸಿಗಲಿ ಎಂದು ಶುಭ ಹಾರೈಸಿದರು.
ಕಾ.ನಿ.ಪ. ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಮಾತನಾಡಿ ಸುಬ್ರಹ್ಮಣ್ಯ ಬಂಟ ಅವರು ಕಳೆದ 26 ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದು ಈ ಹಿಂದೆಯೂ ಹಲವು ಪ್ರಶಸ್ತಿ ಪುರಸ್ಕೃತರಾದ ಇವರ ಸೇವೆ ಸ್ಮರಣೀಯ ಎಂದರು ಬೇಳಾ ಬಂದರದ ಯುವ ಉದ್ದಿಮೆದಾರರಾದ ಸುಜೀತ ಎನ್ ನಾಯ್ಕ , ಅನೀಲ ನಾಯ್ಕ, ಮೋಹನ ಬಿ ನಾಯ್ಕ, ಅಂಕೋಲಾ ಡಿಪೋದ ಸಹಾಯಕ ಕಾರ್ಯ ಅಧೀಕ್ಷಕ ಹರೀಶ ಖಾರ್ವಿ, ಸಂಚಾರಿ ನಿಯಂತ್ರಕ ಪ್ರಕಾಶ ನಾಯ್ಕ, ಭದ್ರತಾ ಹವಾಲ್ದಾರ್ ಎಸ್.ಎಮ್. ಕಡ್ಲೆ, ಕಿರಿಯ ಸಹಾಯಕಿ ವೇದಾ ಸುನೀಲ ನಾಯ್ಕ, ಸಹಾಯಕ ಉಗ್ರಾಣ ಪಾಲಕಿ ಮಹಾಲಕ್ಮೀ ಎಲ್. ನಾಯ್ಕ, ತಾಂತ್ರಿಕ ಸಹಾಯಕರಾದ ಡಿ.ಜಿ. ನಾಯ್ಕ, ಎನ್.ಕೆ.ಮಡಿವಾಳ , ಕಿರಿಯ ಸಹಾಯಕ ಸಾಗರ ನಾಯ್ಕ, ನಿರ್ವಾಹಕ ಸುರೇಶ ನಾಯ್ಕ ಇನ್ನಿತರರು ಇದ್ದರು. ಸುಬ್ರಹ್ಮಣ್ಯ ಬಂಟ ಇವರ ಸೇವಾ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು ಅವರಿಗೆ ಒಲಿದು ಬಂದಿರುವ ಸೇವಾ ಪುರಸ್ಕಾರಕ್ಕೆ ಸಂದೇಶ ವೆಂಕಟ್ರಮಣ ನಾಯ್ಕ ಅಂಬಾರಕೋಡ್ಲ ಮತ್ತಿತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ