ಅಂಕೋಲಾ : ದಿನಕರ ವೇದಿಕೆ ಉತ್ತರ ಕನ್ನಡ, ಮತ್ತು ರಾಷ್ಟ್ರೀಯ ದಂತ ಆರೋಗ್ಯ ಕಾರ್ಯಕ್ರಮ(NOHP) ಇವರ ಆಶ್ರಯದಲ್ಲಿ ಅಗಸ್ಟ್ 20 ರ ಭಾನುವಾರ ತಾಲೂಕಿನ ಬೇಲೇಕೇರಿ, ಖಾರ್ವಿವಾಡಾದ ಸ ಹಿ ಪ್ರಾ ಶಾಲೆಯಲ್ಲಿ ಪರಿಸರ ಜಾಗೃತಿ ಮತ್ತು ದಂತ ರಕ್ಷಣೆ ( Dental Care) ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲಾ ಆವರಣದಲ್ಲಿ ಫಲ ನೀಡುವ ಗಿಡಗಳನ್ನು ನೆಡುವ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿಯ ಸಂದೇಶ ಸಾರಲಾಯಿತು.
ಉಚಿತ ದಂತ ತಪಾಸಣೆ ನಡೆಸಿ ವಿದ್ಯಾರ್ಥಿಗಳಿಗೆ ಆರೋಗ್ಯ ಕಾಳಿಜಿಯಲ್ಲಿ ದಂತ ರಕ್ಷಣೆ ಮಹತ್ವದ ಕುರಿತು ತಿಳಿ ಹೇಳಲಾಯಿತು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ನಿವೃತ್ತ ಪ್ರವಾಚಕರಾದ ಶ್ರೀ ನಾಗರಾಜ ನಾಯಕ ಅಡಿಗೋಣ, ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರ ಮತ್ತು ಆರೋಗ್ಯ ರಕ್ಷಣೆ ( Dental Care) ಬಗ್ಗೆ ಹೇಳಿ, ಪ್ರತಿ ವರ್ಷ ಒಬ್ಬ ವ್ಯಕ್ತಿ ಕನಿಷ್ಟ ಒಂದು ಗಿಡ ನೆಟ್ಟು ರಕ್ಷಣೆ ಮಾಡಿದರೆ ದೇಶ ಹಸಿರಿನಿಂದ ಕೂಡಿರುವುದಲ್ಲದೆ ಆರೋಗ್ಯಪೂರ್ಣ ಪರಿಸರ ಮತ್ತು ಸಮಾಜ ನಮ್ಮದಾಗುತ್ತದೆ ಎಂದರು.
ನಾಗರಾಜ ನಾಯಕ ಅವರ ಮಗಳು ದಂತ ವೈದ್ಯಾಧಿಕಾರಿ ಡಾ. ಶಿವಾಲಿ ಎನ್.ನಾಯಕ ಇವರು ರಾಷ್ಟ್ರೀಯ ದಂತ ಆರೋಗ್ಯ ಕಾರ್ಯಕ್ರಮ ಹಾಗೂ ಮುಖದ ಸೌಂದರ್ಯ ಹೆಚ್ಚಿಸುವ ಹಲ್ಲಿನ ರಕ್ಷಣೆ ಮಹತ್ವದ ಕುರಿತು ತಿಳಿಸಿದರು. ದಿನಕರ ವೇದಿಕೆಯ ಅಧ್ಯಕ್ಷರಾದ ನಿವೃತ್ತ ಪ್ರಾಚಾರ್ಯ ರವೀಂದ್ರ ಕೇಣಿ ಅಧ್ಯಕತೆ ವಹಿಸಿ ಮಾತನಾಡಿ, ನೆಪಮಾತ್ರಕ್ಕೆ ವನಮಹೋತ್ಸವ ಆಚರಣೆ ಮಾಡದೆ ನೆಟ್ಟ ಗಿಡಗಳನ್ನು ಉಳಿಸಿ ಬೆಳೆಸಬೇಕು ಎನ್ನುವ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದ ತೆಂಗಿನ ಗಿಡಗಳನ್ನು ಇಲ್ಲವೆ ಹಣ್ಣಿನ ಗಿಡಗಳನ್ನು ನೆಟ್ಟು ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ ಎಂದರು.ಶಾಲಾ ಮುಖ್ಯಾಧ್ಯಾಪಕರಾದ ಮಧುಕರ ಕೇಣಿ ಸ್ವಾಗತಿಸಿದರು.
ಶಿಕ್ಷಕಿ ಚಂದ್ರಕಲಾ ನಾಯಕ ಕಾರ್ಯಕ್ರಮ ನಿರೂಪಿಸಿದರು. ದಿನಕರ ವೇದಿಕೆಯ ಕೋಶಾಧ್ಯಕ್ಷರಾದ ಸಂತೋಷ ನಾಯಕ ವಂದಿಸಿದರು ದಿನಕರ ವೇದಿಕೆಯ ಸಹಕಾರ್ಯದರ್ಶಿ ವಸಂತ ಜಿ ನಾಯ್ಕ, ಪದಾಧಿಕಾರಿಗಳಾದ ಎಂ.ಎಂ. ಕರ್ಕಿಕರ, ಕಮಲಾಕರ ಬೋರಕರ, ಸೂಜನ ಕೇಣಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು,ಪಾಲಕರು,ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ