Important
Trending

ಸಾರಾಯಿ ಕುಡಿಯಬೇಡ ಎಂದು ತಾಯಿ ಬುದ್ಧಿವಾದ ಹೇಳಿದ್ದೇ ತಪ್ಪಾ? ಆತ್ಮಹತ್ಯೆ ಮಾಡಿಕೊಂಡ ಮಗ

ಸಿದ್ದಾಪುರ: ಸಾರಾಯಿ ಕುಡಿಯಬೇಡ ಎಂದು ತಾಯಿ ಬುದ್ಧಿವಾದ ಹೇಳಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಾರ್ಸಿಕಟ್ಟಾ ಬಳಿಯ ಹೊನ್ನೆಹದ್ದದಲ್ಲಿ ನಡೆದಿದೆ. ನಾಗೇಂದ್ರ ಈಶ್ವರ ಚನ್ನಯ್ಯ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ. ಮನೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಆತ ವಿಪರೀತ ಸಾರಾಯಿ ಕುಡಿಯುತ್ತಿದ್ದ ಎನ್ನಲಾಗಿದೆ.

ಎಲೆಕ್ಟ್ರಿಕಲ್ ವಸ್ತುಗಳ ದುರಸ್ತಿ ಹಾಗೂ ಕೃಷಿ ಉದ್ಯಮಿ ಉಚಿತ ತರಬೇತಿ: ಊಟ-ವಸತಿ ಸೌಲಭ್ಯ: ಮೊದಲು ಬಂದವರಿಗೆ ಆದ್ಯತೆ

ಇಷ್ಟು ಸಣ್ಣ ವಯಸ್ಸಿಗೆ ಈ ರೀತಿ ಕುಡಿಯುವುದು ಒಳ್ಳೆಯದಲ್ಲಾ ಎಂದು ತನ್ನ ತಾಯಿ ಬುದ್ದಿ ಮಾತು ಹೇಳಿದ್ದಕ್ಕೆ ಮನೆಯಲ್ಲಿದ್ದ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Related Articles

Back to top button