ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ಪಿ.ಎಂ. ಪ್ರೌಢಶಾಲೆ

ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಅವಳಿ ಸಹೋದರಿಯರ ಸಾಧನೆ
ಶೇ. ನೂರರ ತ್ರಿವಿಕ್ರಮ ಸಾಧನೆ ಮಾಡಿದ ಕನ್ನಡ ಭಾಷೆ ವಿದ್ಯಾರ್ಥಿಗಳು.

[sliders_pack id=”1487″]

ಅಂಕೋಲಾ : ಜಿಲ್ಲೆಯ ಪ್ರತಿಷ್ಠಿತ ಕೆನರಾ ವೆಲ್‌ಫೇರ್ ಟ್ರಸ್ಟಿನ ಅಧೀನದಲ್ಲಿ ನಡೆಯುತ್ತಿರುವ ತಾಲೂಕಿನ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಪಿ.ಎಮ್.ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಪರೀಕ್ಷೆಗೆ ಕುಳಿತ ಒಟ್ಟು 136ವಿದ್ಯಾರ್ಥಿಗಳಲ್ಲಿ 123ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಅವರಲ್ಲಿ 69ಬಾಲಕರು ಮತ್ತು 54ಬಾಲಕಿಯರಿದ್ದಾರೆ.

ಅವಳಿ ಸಹೋದರಿಯರ ಸಾಧನೆ : ಮಂದಾರ ಬುದ್ದು ಗೌಡ (583) ಅಂಕ ಗಳಿಸಿ ಶಾಲೆಗೆ ಪ್ರಥಮ, ಮತ್ತು ಮೇಘನಾ ಬುದ್ದು ಗೌಡ 580ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಒಂದೇ ಕುಟುಂಬದ ಅವಳಿ ಸಹೋದರಿಯರು ವಿಶೇಷ ಸಾಧನೆ ಮಾಡಿದ್ದಾರೆ. ಈ ವಿದ್ಯಾರ್ಥಿಗಳು ಬೆಳಂಬಾರದ ಗ್ರಾಮೀಣ ಪ್ರದೇಶದವರಾಗಿದ್ದು, ಪಟ್ಟಣದ ಸಿರಿವಂತ ಮಕ್ಕಳಿಗೂ ಮಾದರಿಯಾಗಿದ್ದಾರೆ.

ಟಾಪ್10 : ಬಿ.ಹರ್ಷಿತ ಗೌಡ 569ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದು, ಉಳಿದಂತೆ ಅಕ್ಷತಾ ಬಾಲಕೃಷ್ಣ ನಾಯ್ಕ, ಮಲ್ಲಿಕಾ ಮಂಜುನಾಥ ನಾಯ್ಕ, ದರ್ಶನ ಮಂಜುನಾಥ ನಾಯ್ಕ, ವಿನಯ ಮೋಹನ ನಾಯ್ಕ, ಬಿ.ಎಲ್.ಸೃಜನ, ಅಶ್ವಿತಾ ಮಂಕಾಳು ಗೌಡ, ದೀಪಿತ ಸುಧೀರ ನಾಯಕ ಟಾಪ್ 10 ಪಟ್ಟಿಯಲ್ಲಿದ್ದಾರೆ.

ಕನ್ನಡಭಾಷೆ ವಿದ್ಯಾರ್ಥಿಗಳ ಶೇ.ನೂರರ ತ್ರಿವಿಕ್ರಮ ಸಾಧನೆ: ಆಧುನಿಕ ಭರಾಟೆಯಲ್ಲಿ ಆಂಗ್ಲ ಮಾಧ್ಯಮದ ಸಪ್ಪಳ ಜೋರಾಗಿರುವ ನಡುವೆಯೇ ಪ್ರಥಮ ಭಾಷೆ ಕನ್ನಡವನ್ನು (ಮಾತೃಭಾಷೆ) ಆಯ್ದುಕೊಂಡ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸತತ 3ನೇ ಬಾರಿ ಸಾಧನೆ ಮಾಡಿದಂತಾಗಿದೆ.

125ಕ್ಕೆ 125ಅಂಕ: ಸೌಜನ್ಯ ಎಂ. ಖಾರ್ವಿ, ದರ್ಶನ ಎಮ್ ನಾಯ್ಕ, ರಕ್ಷಿತ ಪಿ.ನಾಯ್ಕ, ಬಿ.ಎಲ್. ಸೃಜನ, ಶ್ವೇತಾ ತೊನ್ಕೆ, ಅಕ್ಷತಾ ನಾಯ್ಕ, ಭೂಮಿಕಾ ರಾಜು ನಾಯ್ಕ ಪೂರ್ಣ ಅಂಕ ಗಳಿಸುವ ಮೂಲಕ ಮಾತೃ ಭಾಷೆಯ ಪ್ರೇಮ-ಸಾಧನೆ ತೋರಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version