Fishermens Co-operative Society : ಅಧ್ಯಕ್ಷ ಗಾದಿಯ ಜಿದ್ದಾಜಿದ್ದಿಯಲ್ಲಿ ಅದೃಷ್ಟದ ನಗೆ ಬೀರಿದ ಮಹಿಳೆ

ಅಂಕೋಲಾ: ತೀವ್ರ ಜಿದ್ದಾ ಜಿದ್ದಿನಿಂದ ಕೂಡಿದ್ದ ತಾಲೂಕಿನ ಬೆಲೇಕೇರಿಯ ಮೀನುಗಾರರ ಸಹಕಾರಿ ಸಂಘದ ( Fishermens Co-operative Society) ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಿಬ್ಬರ ನಡುವೆ ಸಮ ಬಲ ಏರ್ಪಟ್ಟು, ಚೀಟಿ ಎತ್ತುವಿಕೆ ಮೂಲಕ ಫಲಿತಾಂಶ ನಿರ್ಧರಿಸಬೇಕಾಯಿತು. ಈ ವೇಳೆ ದಿವ್ಯಾ ಸಾದಿಯೆ ವಿಜಯದ ನಗೆ ಬೀರಿದರು. ಉಪಾಧ್ಯಕ್ಷ ಹುದ್ದೆಗೆ ವಿನೋದ ಹರಿಕಂತ್ರ ಮಾತ್ರ ನಾಮಪತ್ರ ಸಲ್ಲಿಸಿದ್ದು ಅವಿರೋಧ ಆಯ್ಕೆಯಾಗಿದ್ದಾರೆ.

( Fishermens Co-operative Society)ಸಹಕಾರಿ ಸಂಘದ ಎಲ್ಲ 11 ಜನ ಸದಸ್ಯರು, ಮತ್ತು ಉಪಾಧ್ಯಕ್ಷರು ಸಹ ಅವಿರೋಧವಾಗಿಯೇ ಆಯ್ಕೆಯಾಗಿದ್ದರೂ, ಅಧ್ಯಕ್ಷ ಸ್ಥಾನಕ್ಕೆ ಮಾತ್ರ ತೀವ್ರ ಪೈಪೋಟಿ ಕಂಡುಬಂದು ಮತದಾನದ ಮೂಲಕವೇ ಆಯ್ಕೆ ಪ್ರಕ್ರಿಯೆ ನಡೆಸುವಂತಾಗಿ ಹಾರವಾಡದ ದಿವ್ಯಾ ಸಾದಿಯೆ ಮತ್ತು ಬೆಲೆಕೇರಿಯ ವಿನೋದ ಬಾನಾವಳಿಕರ ನಡುವೆ ತೀವೃ ಹಣಾಹಣಿ ಕಂಡು ಬಂತು. ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರಿಗೂ ವಿಶೇಷ ಮತದಾನದ ಹಕ್ಕಿತ್ತು ಎನ್ನಲಾಗಿದ್ದು, ಅವರೂ ಮತ ಚಲಾಯಿಸಿದ್ದರಿಂದ 11 ನಿರ್ದೇಶಕರ ಮತ ಸೇರಿ ಒಟ್ಟೂ 12 ಮತಗಳು ಚಲಾವಣೆಯಾಗಿದ್ದವು. ಆದರೆ ಮತ ಎಣಿಕೆ ವೇಳೆ ಇಬ್ಬರೂ ಸಮಾನ ಮತ ಪಡೆದ ಕಾರಣ (6 – 6 ) ಚೀಟಿ ಆರಿಸಿ ಫಲಿತಾಂಶ ನಿರ್ಧರಿಸಲಾಯಿತು.

ಈ ಮೂಲಕ ಬೆಲೇಕೇರಿಯ ಮೀನುಗಾರರ ಸಹಕಾರಿ ಸಂಘಕ್ಕೆ ಪ್ರಥಮ ಬಾರಿಗೆ ಹಾರವಾಡ ಭಾಗದವರು ಅದರಲ್ಲೂ ಮಹಿಳೆಯೊಬ್ಬರು ಅಧ್ಯಕ್ಷ ಸ್ಥಾನ ಅಲಂಕರಿಸಿದರೆ ಉಪಾಧ್ಯಕ್ಷ ಸ್ಥಾನವೂ ಹಾರವಾಡದವರಿಗೆ ಒಲಿದು ಬರುವ ಮೂಲಕ ಹೆಚ್ಚಿನ ಪ್ರಾಭಲ್ಯ ಸಾಧಿಸಿದಂತಾಗಿದೆ.
ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಹಾರವಾಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಂಜುನಾಥ ಟಾಕೇಕರ, ಹಾಲಿ ಉಪಾಧ್ಯಕ್ಷ ಸಂತೋಷ ಹನುಮಟ್ಟೇಕರ್, ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ನಿರ್ದೇಶಕ ರಾಜು ಹರಿಕಂತ್ರ, ಬೆಲೆಕೇರಿ ಮೀನುಗಾರರ ಯೂನಿಯನ್ ಅಧ್ಯಕ್ಷ ಮಂಜುನಾಥ ಬಾನಾವಳಿಕರ, ಮೀನುಗಾರ ಮುಖಂಡ ಪ್ರಮೋದ ಬಾನಾವಳಿಕರ, ಅರವಿಂದ ಕುಡ್ತಲಕರ್ ಮತ್ತಿತರರು ಪ್ರಮುಖ ಪಾತ್ರ ವಹಿಸಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version