Big News
Trending

Shreekumar Travels: ಶ್ರೀಕುಮಾರ ಸಮೂಹ ಸಂಸ್ಥೆಯ ಲಾಡ್ಜಿಂಗ್ & ಬೋರ್ಡಿಂಗ್ ಸೇವೆ ಶುಭಾರಂಭ

ಹೊನ್ನಾವರ: ತಾಲೂಕಿನ ಕರ್ಕಿ ಸಮೀಪ ಶ್ರೀ ಕುಮಾರ ಸಮೂಹ ಸಂಸ್ಥೆಯ ( Shreekumar Travels) ಲಾಡ್ಜಿಂಗ್ ಮತ್ತು ಬೋರ್ಡಿಂಗ್ ಸೇವೆಗೆ ಸಂಸ್ಥೆಯ ಅಧ್ಯಕ್ಷರಾದ ವೆಂಕಟ್ರಮಣ ಹೆಗಡೆ ಕವಲಕ್ಕಿಯವರ ಮೊಮ್ಮಗಳಾದ ಶ್ರೇಯಾ ಹೆಗಡೆ ಚಾಲನೆ ನೀಡಿದರು. ಶ್ರೀಕುಮಾರ್ ಲಾಜಿಸ್ಟಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೊನ್ನಾವರ ಇದರ ಸಂಸ್ಥಾಪಕರಾದ ವೆಂಕ್ರಟಮಣ ಹೆಗಡೆ ಕವಲಕ್ಕಿ ಸಾರಿಗೆ ಕ್ಷೇತ್ರದಲ್ಲಿ ದಾಪುಗಾಲು ಇಟ್ಟಿದ್ದು, ಇದೀಗ ( shreekumar residency) ಲಾಡ್ಜಿಂಗ್ ಸೇವೆ ಆರಂಭಿಸಿದ್ದು, ವರಮಹಾಲಕ್ಷ್ಮೀ ಹಬ್ಬದಂದು ಚಾಲನೆ ದೊರೆಯಿತು.

ಈ ಸಂದರ್ಭದಲ್ಲಿ ಶ್ರೀಕುಮಾರ ಸಮೂಹ ( Shreekumar Travels) ಸಂಸ್ಥೆಯ ಮಾಲಕರದ ವೆಂಕ್ರಟಮಣ ಹೆಗಡೆ ಕವಲಕ್ಕಿ ಮಾತನಾಡಿ ಜಿಲ್ಲೆಯ ಗ್ರಾಹಕರಿಗೆ ಹಾಗೂ ಅಗಮಿಸುವ ಪ್ರವಾಸಿಗರಿಗೆ ದಿನವಿಡೀ ವೈಪೈ ಸೇವೆಯ ಜೊತೆ ನಗುಮುಖದ ಸೇವೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ರೆಸ್ಟೋರೆಂಟ್, 24 ಗಂಟೆ ಬಿಸಿನೀರಿನ ಸೌಲಭ್ಯ ಹೊಂದಿದ್ದು, ಎಲ್ಲಾ ಸೇವೆಗೆ ಬೆಂಬಲ ನೀಡಿದಂತೆ , ಈ ಸೇವೆಗೂ ಪೊತ್ಸಾಹಿಸುವಂತೆ ಮನವಿ ಮಾಡಿದರು.

ಹೌದು, ಸಾವಜನಿಕರು ಹಿಂದೆ ನೀಡಿದ ಸಹಕಾರಕ್ಕಿಂತ ಹೆಚ್ಚಿನ ಸಹಕಾರ ನೀಡುವಂತೆ ಶ್ರೀಕುಮಾರ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ವೆಂಕಟ್ರಮಣ ಹೆಗಡೆಯವರು ಕೋರಿದ್ದಾರೆ. ಒಂದೆ ಒಂದು ಲಗೇಜು ವಾಹನದ ಮೂಲಕ ಸಾರಿಗೆ ಉದ್ಯಮವನ್ನು ಆರಂಭಿಸಿ, ಸತತ ಪರಿಶ್ರಮದ ಮೂಲಕ ಸಾಧನೆಮಾಡಿದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶ್ರೀಕುಮಾರ ಸಮೂಹ ಸಂಸ್ಥೆಯ ಮಾಲಿಕರಾದ ವೆಂಕಟ್ರಮಣ ಹೆಗಡೆ ಕವಲಕ್ಕಿಯವರು, ಈ ಮೊದಲು ನೀಡಿದ ಸಹಕಾರವನ್ನೇ ನೀಡಲು ಕೋರಿದ್ದಾರೆ.

ಇದೇ ವೇಳೆ, ಸೂರ್ಯನಾರಾಯಣ ಹೆಗಡೆ ಅವರು ಮಾತನಾಡಿ ಉತ್ತರಕನ್ನಡ ಜಿಲ್ಲೆ ಪ್ರವಾಸಿಗರ ಸ್ವರ್ಗವಾಗಿದ್ದು, ಸಂದರ ಪರಿಸರ ಒಳಗೊಂಡಿರುವ ಸ್ಥಳದಲ್ಲಿ ಈ ಸೇವೆ ಆರಂಭಿಸಿದ್ದಾರೆ. ಮುರ್ಡೇಶ್ವರ, ಇಡಗುಂಜಿ, ಗೇರುಸೊಪ್ಪಾ, ಗೊಕರ್ಣ, ಯಾಣದಂತಹ ಪ್ರವಾಸಿ ಸ್ಥಳಕ್ಕೆ ಮಧ್ಯವರ್ತಿಯಾಗಿರುವ ಕರ್ಕಿ (shreekumar residency) ಸಮೀಪ ಲಾಡ್ಜಿಂಗ್ ಆರಂಭಿಸಿವುದು ಪ್ರವಾಸಿಗರಿಗೂ ಅನುಕೂಲವಾಗಲಿದೆ ಎಂದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

Back to top button