ಡಿಸೆಂಬರ್ 4 ರಂದು ಅದ್ಧೂರಿಯಾಗಿ ನಡೆಯಲಿದೆ 16ನೇ ಶರವಾತಿ ಉತ್ಸವ: ಸೆಂಟ್ ಅಂತೋನಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜನೆ

ಹೊನ್ನಾವರ: ವೆಂಕಟ್ರಮಣ ಹೆಕಡೆ ಕವಲಕ್ಕಿ ಸಾರಥ್ಯದ, ಶರಾವತಿ ಸಾಂಸ್ಕೃತಿಕ ವೇದಿಕೆ ಹೊನ್ನಾವರ ವತಿಯಿಂದ 16 ವರ್ಷದ ಶರಾವತಿ ಉತ್ಸವ ಡಿಸೆಂಬರ್ 4 ರಂದು ಹೊನ್ನಾವರ ಪಟ್ಟಣದ ಸೆಂಟ್ ಅಂತೋನಿ ಪ್ರೌಡಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷರಾದ ವೆಂಕಟ್ರಮಣ ಹೆಗಡೆ ಕವಲಕ್ಕಿ ಮಾಹಿತಿ ನೀಡಿದರು,

ಹಿಂಬದಿಯಿoದ ಬರುತ್ತಿದ್ದ ಟೆಂಪೋ ಡಿಕ್ಕಿ: ಸಿನಿಮಿಯ ರೀತಿಯಲ್ಲಿ ಬೈಕ್ ಸಮೇತ ಹಾರಿ ಎದುರಿನಿಂದ ಬರುತ್ತಿದ್ದ ಕಾರಿಗೆ ಬಡಿದು ಫೋಟೋಗ್ರಾಫರ್ ಸಾವು

ಹೊನ್ನಾವರ ಕರ್ಕಿಯಲ್ಲಿರುವ ಶ್ರೀಕುಮಾರ ಸಮೋಹ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಇಂದು ನಡೆದ ಪತ್ರಿಕಾ ಗೋಷ್ಟಿಯಲ್ಲಿ ಶರಾವತಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ವೆಂಕಟ್ರಮಣ ಹೆಗಡೆ ಕವಲಕ್ಕಿ ಮಾತನಾಡಿ ಡಿಸೆಂಬರ್ 4 ರಂದು 4;30ಕ್ಕೆ ಪ್ರತಿಭಾನ್ವಿತ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಂತರ ತಾಯಿ ಶರಾವತಿ ನಮನದಲ್ಲಿ ಶರಾವತಿ ಜಲಕುಂಭಕ್ಕೆ ಆರಿತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಲಿದ್ದು, ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ಗೋವಿಂದ ನಾಯ್ಕ ಭಟ್ಕಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕರಾದ ಶಿವಾನಂದ ಹೆಗಡೆ ಕಡತೋಕಾ ಉಪಸ್ಥಿತಿ ವಹಿಸಲಿದ್ದಾರೆ. ಇದೇ ವೇಳೆ ವೈದ್ಯರಾದ ಡಾ ರಾಜೇಶ ಕಿಣಿ, ಯಕ್ಷಗಾನ ಕಲಾವಿದರಾದ ಸರ್ವೆಶ್ವರ ಹೆಗಡೆ, ನಿವೃತ್ತ ಸೈನಿಕ ಈಶ್ವರ ನಾಯ್ಕ ಇವರನ್ನು ಸನ್ಮಾನಿಸಲಾಗುವುದು.

ಸಭಾ ಕಾರ್ಯಕ್ರಮದ ಬಳಿಕ ನಾಟ್ಯಂಜಲಿ ಕಲಾ ಕೇಂದ್ರ ಶಿರಸಿ ಇವರಿಂದ ಭರತನಾಟ್ಯ, ಶ್ರೀ ಚೆನ್ನಕೇಶವ ಪ್ರೌಡಶಾಲೆ ಕರ್ಕಿ ವಿದ್ಯಾರ್ಥಿಗಳಿಂದ ಸುಗ್ಗಿ ಕುಣಿತ, ಹಾಗೂ ಯಕ್ಷಗಾನ ನೃತ್ಯವೈಭವ, ಗಂದರ್ವ ಕಲಾಕೇಂದ್ರ ಕುಮಟಾ ಇವರಿಂದ ಸಂಗೀತ ಕಾರ್ಯಕ್ರಮ, ದಿವಾಕರ ಇಂಗ್ಲೀಷ್ ಮಾಧ್ಯಮ ಶಾಲೆ ಧಾರೇಶ್ವರ ಇವರಿಂದ ನೃತ್ಯ ನೇರವೇರಲಿದೆ. ರಾತ್ರಿ 8.30 ರಿಂದ ವಿವಿಧ ಕಲಾವಿದರ ಕೂಡುವಿಕೆಯಲ್ಲಿ ದಕ್ಷಯಜ್ಞ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಸಾರ್ವಜನಿಕರು ಹೆಚ್ಚಿನ ಸಂಖೆಯಲ್ಲಿ ಆಗಮಿಸಿ ಪ್ರೋತ್ಸಹನೀಡಿ ಎಂದು ವಿನಂತಿಸಿಕೋoಡರು, ಈ ಸಂದರ್ಭದಲ್ಲಿ ಶರಾವತಿ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಶಂಭು ಹೆಗಡೆ ಸಂತನ್ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

Exit mobile version