Dog Cancer: ಯೋನಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶ್ವಾನಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ
18 ಗಡ್ಡೆಗಳನ್ನು ಹೊರತೆಗೆದ ವೈದ್ಯರು
ಶಿರಸಿ: 10 ವರ್ಷದ ಶ್ವಾನವೊಂದು ಕ್ಯಾನ್ಸರ್‌ನಿಂದಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಹೌದು, ಕಳೆದ 8 ತಿಂಗಳಿoದ ಯೋನಿಯ ಕ್ಯಾನ್ಸರ್‌ನಿಂದ ಬಳಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ವಾನವನ್ನು (Dog Cancer) ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಬದುಕಿಸಿದ್ದಾರೆ. ಯೋನಿಯಿಂದ ಗರ್ಭಕೋಶದ ಕಂಠದವರೆಗೆ ಹರಡಿದ್ದ 18 ಗಡ್ಡೆಗಳನ್ನು ಯೋನಿಯಿಂದ ಗರ್ಭಕೋಶದ ಕಂಠದವರೆಗೆ ಹರಡಿದ್ದ 18 ಗಡ್ಡೆಗಳನ್ನು ಒಂದೂವರೆ ಗಂಟೆಯ ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯಲಾಗಿದೆ.
TSS ಸಮರ್ಪಣಾ ಪಶುವೈದ್ಯ ಡಾ.ಪಿ.ಎಸ್.ಹೆಗಡೆ ಕಳೆದ 8 ತಿಂಗಳಿoದ ಯೋನಿಯ ಕ್ಯಾನ್ಸರ್‌ನಿಂದ ಬಳಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಕುಮಟಾ ವಾಲ್ಗಳ್ಳಿಯ ಗಣಪತಿ ಮಡಿವಾಳ ಇವರ 10 ವರ್ಷದ ಡಾಲ್ ಮೆಶನ್ ನಾಯಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಮರುಜನ್ಮ ನೀಡಿದ್ದಾರೆ. (Dog Cancer) ಡಾಲ್ ಮೆಶನ್ ನಾಯಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿದೆ.
ಟ್ರಾನ್ಸ್ಮಿಸ್ಸಿಬಲ್ ವೆನೆರಿಯಲ್ ಟ್ಯೂಮರ್ ( ಟಿವಿಟಿ ) ಎನ್ನುವ ಲೈಂಗಿಕ ರೋಗ ಹೆಣ್ಣು ಶ್ವಾನಗಳಲ್ಲಿ ಸಾಮಾನ್ಯವಾಗಿದ್ದು ಈ ಶ್ವಾನದಲ್ಲಿ ಫ್ಯಾಟಿನ್ ನೆಕ್ರೋಸಿಸ್ ರೀತಿಯ ಗಡ್ಡೆ ಇಷ್ಟೊಂದು ಪ್ರಮಾಣದಲ್ಲಿ ಹರಡಿದ್ದು ಮಾತ್ರ ವಿಶೇಷವೇ ಸರಿ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಅತ್ಯಂತ ಜಾಗರೂಕವಾಗಿ ರಕ್ತಸ್ರಾವವಿಲ್ಲದೆ ನಡೆದ ಈ ಶಸ್ತ್ರಚಿಕಿತ್ಸೆಗೆ ನಾಗಶ್ರೀ, ಪ್ರದೀಪ ಹೆಗಡೆ ಮತ್ತು ಶ್ರೀನಿಧಿ ಹೆಗಡೆ ಸಹಕರಿಸಿದರು.
ವಿಸ್ಮಯ ನ್ಯೂಸ್, ಶಿರಸಿ