Anjumala Nayak: ರಾಷ್ಟ್ರಪತಿಗಳ ಶಾಘನೀಯ ಸೇವಾಪದಕ ಪುರಸ್ಕೃತ ಡಿವೈಎಸ್ಪಿ ಅಂಜುಮಾಲಾ ನಾಯಕರಿಗೆ ಗೌರವ
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಮಹಿಳಾ ಪೊಲೀಸ್ ಅಧಿಕಾರಿ ಡಿವೈಎಸ್ಪಿ (Anjumala Nayak) ಅಂಜುಮಾಲಾ ನಾಯಕ ಇತ್ತೀಚೆಗೆ ರಾಷ್ಟಪತಿ ಪದಕ ಪುರಸ್ಕಾರಕ್ಕೆ ಭಾಜನರಾದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಂಕೋಲಾ ಘಟಕದ ವತಿಯಿಂದ ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಡಿ ಅಂಜುಮಾಲಾ ಅವರ ವಂದಿಗೆಯ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ ಮೂಲತಃ ಅಂಕೋಲಾದ ಸ್ವಾತಂತ್ರ್ಯ ಹೋರಾಟದ ನೆಲವಾದ ಶಿರಗುಂಜಿಯವರಾದ ಇವರು ಜಿಲ್ಲೆಯ ಮೊದಲ ಮಹಿಳಾ ಪೊಲೀಸ್ ಅಧಿಕಾರಿ (Anjumala Nayak)ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ತಮ್ಮ ಕರ್ತವ್ಯದಲ್ಲಿ ನಿಷ್ಠೆ ಮತ್ತು ಜವಾಬ್ದಾರಿಯುತ ಕಾರ್ಯನಿರ್ವಹಣೆ ಆದ್ಯತೆ ನೀಡುವ ಇವರು ಇತ್ತೀಚೆಗೆ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಭಾಜನರಾಗಿರುವದು ಅಂಕೋಲಾ ತಾಲೂಕಿಗೆ ಮತ್ತು ಜಿಲ್ಲೆಗೆ ಹೆಮ್ಮೆ ತಂದಿದೆ. ಸುಸಂಸ್ಕ್ರತ ಮನೆತನದ ತಿಮ್ಮಣ್ಣ ಮತ್ತು ಶಾಂತಿ ನಾಯಕ ದಂಪತಿಗಳ ಮಗಳಾಗಿ ಉತ್ತಮ ಶಿಕ್ಷಣ, ಉತ್ತಮ ಹುದ್ದೆಯೊಂದಿಗೆ ಈಗ ಶ್ರೇಷ್ಠ ಪ್ರಶಸ್ತಿಗೆ ಪುರಸ್ಕ್ರತಗೊಂಡಿರುವದು ನಮಗೆಲ್ಲ ಸಂತಸದ ವಿಷಯ ಮುಂದೆಯೂ ಕೂಡ ಇವರ ಅಮೂಲ್ಯ ಸೇವೆ ಈ ಸಮಾಜಕ್ಕೆ ದೊರಕಲಿ ಮತ್ತು ಇನ್ನೂ ಹೆಚ್ಚಿನ ಪ್ರಶಸ್ತಿ ಪುರಸ್ಕಾರಗಳು ಲಭಿಸಲಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ (Anjumala Nayak) ಅಂಜುಮಾಲಾ ಕಸಾಪ ವತಿಯಿಂದ ಅಂಕೋಲೆಯಲ್ಲಿ ನೀಡಿದ ಸನ್ಮಾನ ಖುಷಿ ತಂದಿದೆ. ನನಗೆ ಉತ್ತಮ ಶಿಕ್ಷಣ ನೀಡಿದ ತಂದೆ ತಾಯಿ, ಸಹೋದರ ಡಾ.ಸಂಜು, ಹಾಗೂ ಪತಿ ಮಹೇಶ ಇವರೆಲ್ಲರ ಪ್ರೋತ್ಸಾಹದಿಂದ ಸಾಧನೆ ಮಾಡಲು ಸಾಧ್ಯವಾಯಿತು. ಚಿಕ್ಕಂದಿನಿಂದಲೂ ಪುಸ್ತಕ ಓದುವ ಹವ್ಯಾಸ ಇತ್ತು, ಸನ್ಮಾನದ ಕಾರಣದಿಂದ ಕಸಾಪದಲ್ಲಿರುವ ಗುರುಗಳನ್ನು, ಸಾಹಿತಿಗಳನ್ನು ಭೇಟಿಮಾಡುವ ಭಾಗ್ಯ ಒದಗಿತು ಎಂದರು. ಹಾಗೂ ಪೊಲೀಸ್ ಇಲಾಖೆಗೆ ಈ ತಾಲೂಕಿನ, ಈ ಜಿಲ್ಲೆಯ ಮಹಿಳೆಯರು ಹೆಚ್ಚಾಗಿ ಸೇರುವಂತಾಗಬೇಕು ಎಂದರು.
ಅಂಜುಮಾಲಾ ಅವರ ಪತಿ ಮಹೇಶ ಮಾತನಾಡಿ ಕಸಾಪ ತಾಲೂಕಾ ಘಟಕದ ಸರ್ವರಿಗೂ ಧನ್ಯವಾದ ತಿಳಿಸಿದರು. ಕಾರ್ಯದರ್ಶಿ ಗಣಪತಿ ತಾಂಡೇಲ ವಂದಿಸಿದರು. ಈ ಸಂದರ್ಭದಲ್ಲಿ ಕಸಾಪ ಕೋಶಾಧ್ಯಕ್ಷ ಪ್ರಾಚಾರ್ಯ ಡಾ.ಎಸ್ ವಿ ವಸ್ತ್ರದ, ಕಾರ್ಯದರ್ಶಿ ಜಗದೀಶ ನಾಯಕ ಹೊಸ್ಕೇರಿ, ಸದಸ್ಯರಾದ ಸಾಹಿತಿ ನಾಗೇಂದ್ರ ತೊರ್ಕೆ, ಬಾಲಚಂದ್ರ ನಾಯಕ, ಪ್ರಕಾಶ ಕುಂಜಿ, ಎನ್ ವಿ ರಾಠೋಡ, ಸುಜೀತ ಎನ್ ನಾಯ್ಕ, ಡಾ. ಪುಷ್ಪಾ ನಾಯ್ಕ, ರಫೀಕ ಶೇಖ, ಎಂ ಬಿ ಆಗೇರ, ಡಾ.ಸಂಜು ನಾಯಕ, ಗೌರೀಶ ನಾಯಕ ಶಿರಗುಂಜಿ ಸೇರಿದಂತೆ ಕಸಾಪ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ