Follow Us On

Google News
Important
Trending

Hindu Gods: ಅವಹೇಳನಕಾರಿ ಹೇಳಿಕೆ: ವಿಡಿಯೋ ವೈರಲ್ ಬೆನ್ನಲ್ಲೆ ಬೃಹತ್ ಪ್ರತಿಭಟನೆ !

ಕಾರವಾರ: ಹಿಂದೂ ಧರ್ಮ ಹಾಗೂ ದೇವರುಗಳ (Hindu Gods) ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಎಲಿಷಾ ಎಲಕಪಾಟಿ ಬಂಧಿಸುವoತೆ ಆಗ್ರಹಿಸಿ ಕಾರವಾರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಮಿತ್ರಸಮಾಜ ಮೈದಾನದಲ್ಲಿ ಸೇರಿದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದಲಿತ ಮುಖಂಡ ಎಲಿಷಾ ಎಲಕಪಾಟಿ ಕೀಳು ಮಟ್ಟದ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದರು. ಈಶ್ವರ- ಪಾರ್ವತಿ, ಶ್ರೀರಾಮ-ಸೀತೆ, ವಾಲ್ಮೀಕಿ, ಲವ-ಕುಶ, ಹನುಮಂತನ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ್ದು, ಹಿಂದೂ ದೇವರನ್ನು ತೆಗಳಿ ಏಸುವನ್ನು ಹೊಗಳಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಶ್ರೀಕೃಷ್ಣ ಪರಮಾತ್ಮ ಸಾವಿರಾರು ಹೆಣ್ಣುಮಕ್ಕಳ ಜತೆ ಮಜಾ ಮಾಡಿದ್ದಾನೆ. ಆದರೆ ಏಸು ಹಾಗೆ ಮಾಡಿಲ್ಲ. ಪ್ರಪಂಚದ ಜನರ ಪಾಪವನ್ನು ರಕ್ತದಿಂದ ಪರಿಹಾರ ಮಾಡಲು ಏಸು ಸ್ವಾಮಿ ಭೂಮಿಯಲ್ಲಿ ಹುಟ್ಟಿದ್ದಾನೆ ಎಂದು ಹಿಂದು ದೇವರನ್ನು ತೆಗಳಿ ಏಸುವನ್ನು ಹೊಗಳಿ ಮಾತನಾಡಿದ್ದಾನೆ. ಹೀಗೆ ಧರ್ಮದ ನಡುವೆ ಒಡಕು ತರುವ ಕೆಲ ಮಾಡಿರುವ ಎಲಕಪಾಟಿ ಬಂಧಿಸುವುದು ಮಾತ್ರವಲ್ಲದೆ ಮುಂದಿನದಿನಗಳಲ್ಲಿ ಆತನನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಇನ್ನು ದೇಶವನ್ನು ಹಿಜಾಡಗಳು ಆಳುತ್ತಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿರುವ ಎಲಕಪಾಟಿ ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಹಿರಿಯ ನಾಯಕರ ಹೆಸರನ್ನು ಉಲ್ಲೆಕ ಮಾಡಿ ಅವಮಾನಿಸಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಈತ ಜನರಿಗೆ ಮನೆ ಕೊಡಿಸುವುದಾಗಿ ದಲಿತ ಸಮುದಾಯದ ಜನರಿಂದ ಹಣ ವಸೂಲಿ ಮಾಡಿದ್ದಾರೆ. ಪ್ರತಿ ಭಾರಿ ಮೀಟಿಂಗ್, ಹೋರಾಟ ಹೀಗೆ ನಾನಾ ಕಾರಣ ಹೇಳಿ ಜನರಿಂದ ಹಣ ಕಿತ್ತುಕೊಂಡಿದ್ದಾರೆ. ಆದರೆ ಈವರೆಗೂ ಮನೆಕೊಡಿಸುವ ಕೆಲಸ ಮಾಡಿಲ್ಲ. ಅಲ್ಲದೆ ಈತ ಜನರನ್ನು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಕ್ಕೂ ಯತ್ನಿಸುತ್ತಾನೆ. ದಲಿತ ಸಮುದಾಯದವರ ನಡುವೆ ಒಡಕು ತಂದು ಆ ಮೂಲಕ ತನ್ನ ಹಿಡಿತ ಸಾಧಿಸುತ್ತಾನೆ. ಈತ ದಲಿತ ಸಮುದಾಯಕ್ಕೆ ಸೇರಿರುವ ಬಗ್ಗೆ ಕೂಡ ಅನುಮಾನಗಳಿದ್ದು ಈ ಬಗ್ಗೆ ತನಿಖೆ ನಡೆಸಬೇಕು. ಕೂಡಲೇ ಈತನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಳಿಕ ಮಿತ್ರಸಮಾಜದಿಂದ ನಗರದ ಸುಭಾಸ್ ಸರ್ಕಲ್ ಮೂಲಕ ಗ್ರಾಮೀಣ ಪೊಲೀಸ್ ಠಾಣೆ ವರೆಗೆ ಮೆರವಣಿಗೆ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರು ಕೂಡ ಪ್ರತಿಭಟನೆ ನಡೆಸುತ್ತಿದ್ದ ಕಾರಣ ಒಟ್ಟಾಗ ಎಲಿಷಾ ಎಲಕಪಾಟಿ ವಿರುದ್ಧ ಘೋಷಣೆ ಕೂಗಿ ಕೂಡಲೇ ಬಂಧಿಸುವoತೆ ಆಗ್ರಹಿಸಿದರು. ಒಂದೊಮ್ಮೆ ಬಂಧನ ಮಾಡದೆ ಇದ್ದಲ್ಲಿ ಸೋಮವಾರ ಕಾರವಾರ ಬಂದ್ ಮಾಡುವುದಾಗಿಯೂ ಪ್ರತಿಭಟನಾಕಾರರು ಪೊಲೀಸರಿಗೆ ಎಚ್ಚರಿಸಿದ್ದಾರೆ.

ಇನ್ನು ದಲಿತ ಮುಖಂಡ ಎಲಿಷಾ ಎಲಕಪಾಟಿ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಎಲಿಷಾ ಎಲಕಪಾಟಿ ತಲೆಮರೆಸಿಕೊಂಡಿದ್ದು ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button