Follow Us On

Google News
Important
Trending

Cobra Snake: ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು: ಡಬ್ಬಿಯಲ್ಲಿ ತುಂಬಿಸುವಾಗ ಬುಸ್ ಗುಡುತ್ತ ಹೆಡೆ ಎತ್ತಿದ ನಾಗರ

ಅಂಕೋಲಾ: ಟೇಲರ್ ಒಬ್ಬರ ಮನೆಯ ಒಳಗೆ ಬಂದು ಸಂದಿಯಲ್ಲಿ ಅವಿತು, ಮನೆಯವರಲ್ಲಿ ಆತಂಕ ಮೂಡಿಸಿದ್ದ ನಾಗರಹಾವೊಂದನ್ನು (Cobra Snake) ಹಿಡಿದು, ಪ್ಲಾಸ್ಟಿಕ್ ಡಬ್ಬಿಯಲ್ಲಿ ತುಂಬಿ, ಸಂರಕ್ಷಿಸಿ, ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರುವ ಮೂಲಕ ಉರಗ ಪ್ರೇಮಿ ಸ್ಯಾಮುವೆಲ್ ಎನ್ನುವ ಯುವಕ ಟೇಲರ್ ಮನೆಯವರ ಮತ್ತು ಅಕ್ಕ ಪಕ್ಕದವರ ಆತಂಕ ದೂರ ಮಾಡಿದರು.

ಇದನ್ನೂ ಓದಿ: ಕೇಂದ್ರ ಸರ್ಕಾರಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

ಲಕ್ಷ್ಮೇಶ್ವರ – ಕುಂಬಾರಕೇರಿಯ ನಿವಾಸಿ , ಹೆಸರಾಂತ ದರ್ಜಿ ಸುಬ್ರಹ್ಯಣ್ಯ (ಎಸ್. ಎನ್ ಟೇಲರ್ ) ಮನೆಯಲ್ಲಿ ಶನಿವಾರ ಸಂಜೆಯ ವೇಳೆ ನಾಗರ ಹಾವೊಂದು (Cobra Snake) ಕಾಣಿಸಿಕೊಂಡು ಆತಂಕ ಮೂಡಿಸಿತ್ತು.ಸ್ಥಳೀಯರು ಉರಗ ಸಂರಕ್ಷಕ ಮಹೇಶ ನಾಯ್ಕ ಇವರಿಗೆ ವಿಷಯ ತಿಳಿಸಿದ್ದರು. ಆದರೆ ಈ ವೇಳೆ ಅವರು ತುರ್ತು ಸಭೆಯ ನಿಮಿತ್ತ ಬೇರೆಡೆ ಇದ್ದರಿಂದ ತನ್ನ ಶಿಷ್ಯನಂತಿರುವ ಉರಗ ಪ್ರೇಮಿ ಯುವಕ ಸ್ಯಾಮುವೆಲ್ (ಸ್ಯಾಮ್ ) ಈತನಿಗೆ ಸ್ಥಳಕ್ಕೆ ಹೋಗುವಂತೆ ಸೂಚಿಸಿದ್ದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ಯಾಮ್ ,ಚಾಕ ಚಕ್ಯತೆಯಿಂದ ನಾಗರಹಾವನ್ನು (Cobra )ಹಿಡಿದು ಪ್ಲಾಸ್ಟಿಕ್ ಡಬ್ಬಿಗೆ ತುಂಬಿಸಲು ಮುಂದಾದ ವೇಳೆ ನಾಗರಹಾವು ಬುಸ್ ಎನ್ನುತ್ತಾ ಹೆಡೆ ಎತ್ತುವುದನ್ನು ಕಂಡು,ಸ್ಥಳೀಯರು ರೋಮಾಂಚನಗೊಂಡರು. ನಂತರ ನಾಗರಹಾವನ್ನು ನಿಧಾನವಾಗಿ ಡಬ್ಬಿ ಒಳ ಹೋಗುವಂತೆ ಮಾಡಿದ ಸ್ಯಾಮ್,ಅದನ್ನು ಸುರಕ್ಷಿತವಾಗಿ ತೆಗೆದುಕೊಂಡು ಹೋಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರುವ ಮೂಲಕ ಎಸ್ ಎನ್ ಟೇಲರ್ ಮತ್ತು ಕುಟುಂಬದವರು ಹಾಗೂ ಸ್ಥಳೀಯರ ಆತಂಕ ದೂರ ಮಾಡಿದರು.

ಪ್ರಸನ್ನ, ಪ್ರವೀಣ, ಡಿಪೋ ಗಣೇಶ, ಪವನ ಮತ್ತಿತರರು ನಾಗರ ಹಾವನ್ನು (Cobra)ಸೆರೆಹಿಡಿಯಲು ಸಹಕರಿಸಿದರು.ಹವಾಮಾನ ಬದಲಾವಣೆ,ಹೆಚ್ಚುತ್ತಿರುವ ಉಷ್ಣಾಂಶ,ಆಹಾರ ಅರಸಿ ಹಾವುಗಳು ಬಿಲ ಬಿಟ್ಟು ಹೊರ ಬರುತ್ತಿದ್ದು ಸಾರ್ವಜನಿಕರು ಅನಗತ್ಯ ಆತಂಕ ಪಡದೇ,ಅರಣ್ಯ ಇಲಾಖೆಗೆ ಇಲ್ಲವೇ ತಮಗೆ ಮಾಹಿತಿ ನೀಡಿ ಉರಗ ಸಂರಕ್ಷಣೆಗೆ ಸಹಕರಿಸಬೇಕೆಂದು ಮಹೇಶ ನಾಯ್ಕ ಮತ್ತು ಸ್ಯಾಮ್ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button