Education: 18 ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ಬರೆಯಲು ಸಿಕ್ಕಿಲ್ಲ ಅವಕಾಶ: ಆಕ್ರೋಶ, ಪ್ರತಿಭಟನೆ
ಪಾಲಕರು ಆಕ್ರೋಶ ಹೊರಹಾಕಿದ್ಯಾಕೆ?
ಭಟ್ಕಳ: ಬಿ.ಎ. ಮತ್ತು ಬಿ.ಕಾಂ.ನ 18 ವಿದ್ಯಾರ್ಥಿಗಳು(students) ಸೆಮಿಸ್ಟರ್ ಪರೀಕ್ಷೆ (exam) ಬರೆಯಲು ಹಾಲ್ ಟಿಕೆಟ್ ಪಡೆದಿದ್ದರು., ಆದರೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ಪರೀಕ್ಷಾ ಕೇಂದ್ರದಿoದ ಹೊರಗೆ ಹಾಕಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ವರ್ತನೆಗೆ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಂದ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸೆಪ್ಟೆಂಬರ 1 ರಿಂದ ಕವಿವಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ (college students) ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದ್ದು, ಇದರಲ್ಲಿ ಭಟ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಿಯುತ್ತಿರುವ ಬಿ.ಎ., ಬಿ.ಕಾಂ. ಮತ್ತು ಬಿ.ಬಿ.ಎ.ನ ಒಟ್ಟು 18 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅಲ್ಲಿನ ಪ್ರಾಂಶುಪಾಲರು ಹಾಗೂ ಪ್ರಭಾರಿ ನಾಗೇಶ ಶೆಟ್ಟಿ ಹಾಜರಾತಿ ಕಡಿಮೆ ಇದೆ ಎಂದು ಅವಕಾಶ ನೀಡಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಪಾಲಕರು ಹಾಗೂ ವಿದ್ಯಾರ್ಥಿಗಳು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪಾಲಕರು ಹಾಗೂ ವಿದ್ಯಾರ್ಥಿಗಳ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡದ ಪ್ರಾಂಶುಪಾಲರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರಾಂಶುಪಾಲೆ ಡಾ. ಉಷಾದೇವಿ ಅವರು ಹಾಜರಾತಿಯ ಬಗ್ಗೆ ನಮ್ಮ ಕಾಲೇಜಿನಲ್ಲಿ ಉಪನ್ಯಾಸಕ ಹಾಗೂ ಯುಯುಸಿಎಂಸಿ ಪ್ರಭಾರಿಯಾಗಿರುವ ನಾಗೇಶ ಶೆಟ್ಟಿ ಅವರಿಗೆ ನೀಡಲಾಗಿದ್ದು ಈ ಬಗ್ಗೆ ನಾನು ಏನು ಮಾಡಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯದಿಂದ ಕಾಲೇಜಿಗೆ ಸಮರ್ಪಕವಾದ ಆದೇಶ ಬಂದಿದ್ದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಿದ್ದೇವೆ ನಮಗೆ ಇನ್ನು ಯಾವುದೇ ಸೂಚನೆ ಬಂದಿಲ್ಲ ಮತ್ತು ವಿಶ್ವವಿದ್ಯಾಲಯದ ಸೂಚನೆಯಂತೆ ಪರೀಕ್ಷೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದರು.
ಭಟ್ಕಳ ಸರ್ಕಾರಿ ಕಾಲೇಜಿನಲ್ಲಿ ಹಲವು ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇದೆ. ಇಲ್ಲಿ ದಾಖಲಾತಿ ಪಡೆದು ಕೆಲವರು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅವರು ಕೇವಲ ಪರೀಕ್ಷೆ ಬರೆಯಲು ಮಾತ್ರ ಬರುತ್ತಿದ್ದಾರೆ. ಹಾಜರಾತಿ ಇಲ್ಲದೇ ಅವರಿಗೆ ಹೇಗೆ ಅರ್ಹತೆ ದೊರೆಯಿತು ಎಂದು ಪರೀಕ್ಷೆಯಿಂದ ವಂಚನೆಗೊಳಗಾದ ವಿದ್ಯಾರ್ಥಿಗಳ ಪಾಲಕರ ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿ ಪಾಲಕ ಮಾದೇವ ನಾಯ್ಕ ಮಾತನಾಡಿ, ನನ್ನ ಆರ್ಥಿಕ ಪರಿಸ್ಥಿತಿ ಹಾಗೂ ಆರೋಗ್ಯ ಸರಿ ಇಲ್ಲ. ನನ್ನ ಮಗ ಬೇರೆ ಕಡೆ ಕೆಲಸ ಮಾಡಿ ಪದವಿ ವ್ಯಾಸಾಂಗ ಮಾಡುತ್ತಿದ್ದಾನೆ. ಹೀಗಿರುವಾಗ ಅವನ ಹಾಜರಾತಿ ಸ್ವಲ್ಪ ಕಡಿಮೆ ಆಗಿದೆ. ಆದರೆ ವಿಶ್ವವಿದ್ಯಾಲಯದವರು ಹಾಲ್ ಟಿಕೇಟ್ ಹಾಗೂ ವೆಬ್ ಸೈಟ್‌ನಲ್ಲಿ ಅರ್ಹತೆ ಇದೆ ಎಂದಾಗಲೂ ಪರೀಕ್ಷೆ ಬರೆಯಲು ಅವಕಾಶ ನೀಡದೆ ಪರೀಕ್ಷೆ ಬರೆಯಲು ಅವಕಾಶ ನೀಡದೇ ಮಗನ ಭವಿಷ್ಯದ ಜೊತೆ ಚೆಲ್ಲಾಟವಾಡುವದು ಸರಿಯಲ್ಲ ಎಂದು ದೂರಿದರು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ