ಹೊನ್ನಾವರದಲ್ಲಿ ಇಂದು ದಾಖಲಾದ ಕರೊನಾ ಕೇಸ್ ಎಷ್ಟು?

ಹೊಸಾಕುಳಿ, ಕರ್ಕಿ, ಸರಳಗಿ, ಪಾವಿನಕುರ್ವಾದಲ್ಲಿ ಸೋಂಕು ಪತ್ತೆ
45 ಮಂದಿಗೆ ಮನೆಯಲ್ಲಿಯೇ ಚಿಕಿತ್ಸೆ

[sliders_pack id=”3498″]

ಹೊನ್ನಾವರ: ತಾಲೂಕಿನಲ್ಲಿ ಇಂದು ನಾಲ್ವರಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಪಟ್ಟಣದ 24 ವರ್ಷದ ಮಹಿಳೆ, ಹೊಸಾಕುಳಿಯ 65 ಮಹಿಳೆ, ಸರಳಗಿಯ 50 ವರ್ಷದ ಮಹಿಳೆ, ಕರ್ಕಿ ಪಾವಿನಕುರ್ವಾದ 58 ವರ್ಷದ ಪುರುಷ ಸೇರಿ ಒಟ್ಟು ನಾಲ್ಕು ಜನರಲ್ಲಿ ಕರೊನಾ ದೃಢಪಟ್ಟಿದೆ.


ಹೊಸಾಕುಳಿಯ ಮಹಿಳೆ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸರಳಗಿಯ ಮಹಿಳೆ ಭಟ್ಕಳ ಆಸ್ಪತ್ರೆಯಲ್ಲಿ ದಾಖಲಾಗಿರುವ ಕುರಿತು ಮಾಹಿತಿ ತಿಳಿದು ಬಂದಿದೆ. ಹೊನ್ನಾವರ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಕೆಲ ಸಾರ್ವಜನಿಕರು ಯಾವುದೇ ಮುಂಜಾಗೃತೆ ವಹಿಸದೆ ತಿರುಗಾಡುತ್ತಿದ್ದಾರೆ. ತಾಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 217ಕ್ಕೆ ಏರಿಕೆಯಾಗಿದ್ದು, ತಾಲೂಕಾ ಆಸ್ಪತ್ರೆಯಲ್ಲಿ 15 ಮಂದಿ ಚಿಕಿತ್ಸೆ ಪಡೆಯುತಿದ್ದು, 48 ಜನರು ಮನೆಯಲ್ಲಿಯೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ.

ಈ ಕುರಿತ ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ ವೀಕ್ಷಿಸಿ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version