ಮಾಹಿತಿ
Trending

‘ಕೃಷ್ಣ-ಮುದ್ದು ರಾಧೆ’ ಸ್ಪರ್ಧೆ

[sliders_pack id=”3491″]

ಅಂಕೋಲಾ : ಶೈಕ್ಷಣಿಕ ಕಾರ್ಯಕ್ರಮಗಳ ಜೊತೆ ಜೊತೆಯಲ್ಲಿಯೇ ಹತ್ತಾರು ಸಾಂಸ್ಕøತಿಕ-ಕ್ರೀಡಾ ಚಟುವಟಿಕೆಗಳನ್ನು ನಡೆಸುತ್ತಾ, ತಾಲೂಕಿನಾದ್ಯಂತ ಗಮನ ಸೆಳೆಯುತ್ತಿರುವ, ಪಟ್ಟಣದ ಶಾಂತಿನಿಕೇತನ ಪ್ಲೇ ಸ್ಕೂಲ್ ವತಿಯಿಂದ 2020ನೇ ಸಾಲಿನ ತಾಲೂಕಾಮಟ್ಟದ ಮುದ್ದು ‘ಕೃಷ್ಣ-ಮುದ್ದು ರಾಧೆ’ ಪೋಟೊ ಸ್ಪರ್ಧೆಯನ್ನು ಎರ್ಪಡಿಸಲಾಗಿದ್ದು,ಆಸಕ್ತ ವಿದ್ಯಾರ್ಥಿಗಳ (ಪುಟಾಣಿಗಳ) ಪೋಟೊಗಳನ್ನು,ಸಂಸ್ಥೆಯ ಮೊಬೈಲ್ ಸಂಖ್ಯೆ (7349429934)ಗೆ ವಾಟ್ಸಪ್ ಮೂಲಕ ಕಳುಹಿಸಬಹುದಾಗಿದೆ.

ಬಹುಮಾನ ಮತ್ತು ವಿವರ : ಪ್ರತಿ ವರ್ಷ ‘ಮುದ್ದು ಕೃಷ್ಣ-ಮುದ್ದು ರಾಧೆ’ ಸ್ಪರ್ಧೆ ಏರ್ಪಡಿಸುತ್ತಾ ಬಂದಿದ್ದು, ಕರೊನಾ ಹಿನ್ನಲೆಯಲ್ಲಿ ನೇರವಾಗಿ ವೇಷದಾರಿಗಳ ಸ್ಪರ್ಧೆಯ ಅವಕಾಶ ಮೊಟಕುಗೊಳಿಸಿ ಆನ್‍ಲೈನ್ ಪೋಟೊ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರಥಮ ಬಹುಮಾನ 2000ರೂ, ದ್ವಿತೀಯ ಬಹುಮಾನ 1000ರೂ ಹಾಗೂ ತೃತೀಯ ಬಹುಮಾನ 500ರೂ ಮತ್ತು ಆಕರ್ಷಕ ಪ್ರಶಸ್ತಿ ಫಲಕ ನೀಡಲಾಗುತ್ತದೆ. ಎಲ್ಲಾ ಸ್ಪರ್ಧಾಳುಗಳ ಭಾವಚಿತ್ರ ಮತ್ತು ವಿವರಗಳನ್ನು ಆನ್‍ಲೈನ್ ಸ್ಪರ್ಧೆಗೆ ಅಪ್‍ಲೋಡ್ ಮಾಡಿ ‘ಪೇಜ್ ಲಿಂಕ’ನ್ನು ವಿದ್ಯಾರ್ಥಿ ಪಾಲಕರಿಗೆ ಕಳುಹಿಸಲಾಗುತ್ತದೆ. ಅವರು ಆ ಲಿಂಕ್‍ಗಳನ್ನು ಗೆಳೆಯರು ಆತ್ಮೀಯರಿಗೆ ಕಳುಹಿಸಬಹುದಾಗಿದ್ದು, ಅತಿ ಹೆಚ್ಚು ಲೈಕ್‍ಗಳನ್ನು ಗಳಿಸಿದ ಆಧಾರದ ಮೇಲೆ ಅಗಸ್ಟ 18ರಂದು ವಿಜೇತರ ಯಾದಿ ಘೋಷಿಸಲಾಗುತ್ತದೆ.

ಷರತ್ತುಗಳೇನು? : ಒಂದರಿಂದ 4ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಮೊದಲ 100 ಮಕ್ಕಳಿಗೆ ಸೀಮಿತಗೊಳಿಸಲಾಗಿದೆ. ಕೃಷ್ಣ ಅಥವಾ ರಾಧೆಯ ವೇಷ ಧರಿಸಿದ ಇತ್ತೀಚಿನ ಪೋಟೊವನ್ನು ಮಾತ್ರ ಕಳುಹಿಸತಕ್ಕದು. ಕಳೆದ ವರ್ಷದ ಅಥವಾ ಹಳೆಯದಾದ ಯಾವುದೇ ಪೋಟೊಗಳನ್ನು ಸ್ಪರ್ಧೆಗೆ ಕಳುಹಿಸುವಂತಿಲ್ಲ. ಒಂದು ಮಗುವಿನ ಒಂದೇ ಪೋಟೊವನ್ನು ಕಳುಹಿಸಬೇಕು. ಒಮ್ಮೆ ಕಳುಹಿಸಿದ ಪೋಟೊವನ್ನು ಮತ್ತೇ ಬದಲಾವಣೆ ಮಾಡಲು ಪಾಲಕರಿಗೆ ಅವಕಾಶ ನೀಡಲಾಗುವುದಿಲ್ಲ. ವೇಷದಾರಿ ಪೋಟೊ ಜೊತೆ, ಮಗುವಿನ ಹೆಸರು, ವಯಸ್ಸು, ತಂದೆ ಹಾಗೂ ತಾಯಿಯ ಹೆಸರು ಹಾಗೂ ಸಂಪೂರ್ಣ ವಿಳಾಸ ಕಳುಹಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸಲು ಅಗಸ್ಟ 16 ಕೊನೆಯ ದಿನವಾಗಿದ್ದು, ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಶಾಂತಿ ನಿಕೇತನ ಟ್ರಸ್ಟ್ ನ ಅಧ್ಯಕ್ಷ ತಿಮ್ಮಣ್ಣ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button