Important
Trending
Spotted Deer: ಇಡಗುಂಜಿ ಕ್ರಾಸ್ ಸಮೀಪ ಕಾಣಿಸಿಕೊಂಡ ಜಿಂಕೆಗಳ ಹಿಂಡು: ಕುತೂಹಲದಿಂದ ನೋಡಿದ ಸಾರ್ವಜನಿಕರು
ಸೂಕ್ತಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸಾರ್ವಜನಿಕರ ಆಗ್ರಹ
ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಇಡಗುಂಜಿ ಕ್ರಾಸ್ ಸಮೀಪ ಜಿಂಕೆಗಳ ಹಿಂಡು ಕಾಣಿಸಿಕೊಂಡಿದೆ. ತಾಲುಕಿನ ಇಡಗುಂಜಿ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಿಂಕೆಯ ಗುಂಪು ಕಂಡು ಸಾರ್ವಜನಿಕರು ಚಿಕಿತಗೊಂಡಿದ್ದಾರೆ. ಕಾಡಿನಲ್ಲಿರುವ ಜಿಂಕೆ (Deer) ನಾಡಿಗೆ ಬಂದಿದ್ದು, ಅದರಲ್ಲೂ ಹಿಂಡುಹಿoಡಾಗಿ ಬಂದಿರುವುದು ಜನರು ಕೂತುಹಲದಿಮದ ನೋಡುವಂತಾಯಿತು. ಈ ಜಿಂಕೆಗಳ (Deer) ಗುಂಪು ಹೆದ್ದಾರಿಯಲ್ಲಿ ಒಂದೊಮ್ಮೆ ಬಂದರೆ ವಾಹನಕ್ಕೆ ಅಪ್ಪಳಿಸಿ ಜೀವಹಾನಿಯಾಗುವ ಸಂಭವವಿದ್ದು ,ಅರಣ್ಯ ಇಲಾಖೆಯವರುಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ