Focus News
Trending

Power Cut: ಸಪ್ಟಂಬರ್ 7 ರ ಗುರುವಾರ ಅಂಕೋಲಾದಲ್ಲಿ ವಿದ್ಯುತ್ ವ್ಯತ್ಯಯ ಸಾದ್ಯತೆ

ಜಿಲ್ಲೆಯ ಇತರೆ ತಾಲೂಕುಗಳಲ್ಲಿಯೂ ತ್ರೈಮಾಸಿಕ ನಿರ್ವಹಣಾ ಕೆಲಸ

ಅಂಕೋಲಾ: ವಿದ್ಯುತ್ ವಿತರಣಾ ಕೇಂದ್ರಗಳ ತ್ರೈಮಾಸಿಕ ನಿರ್ವಹಣಾ ಕೆಲಸ ಇರುವುದರಿಂದ ಸೆಪ್ಟೆಂಬರ್ 7 ರಂದು ಗುರುವಾರ ಅಂಕೋಲಾ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ ಆಗುವ ಸಂಭವ ಇರುವುದಾಗಿ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾರವಾರದಲ್ಲಿ 220 ಕೆ.ವಿ ವಿದ್ಯುತ್ ಕೇಂದ್ರ ಹಾಗೂ ಕುಮಟಾದಲ್ಲಿ 110 ಕೆ.ವಿ , 33 ಕೆ.ವಿ ಮತ್ತು 11 ಕೆ.ವಿ ವಿತರಣಾ ಕೇಂದ್ರಗಳ ತ್ರೈಮಾಸಿಕ ನಿರ್ವಹಣಾ ಕೆಲಸ ನಡೆಯಲಿರುವುದರಿಂದ ಬಾಳೆಗುಳಿಯ 110 ಕೆ.ವಿ ,33 ಕೆ.ವಿ ಮತ್ತು 11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಇದರಿಂದಾಗಿ ಅಂಕೋಲಾ ತಾಲೂಕಿನ ಮಾಸ್ತಿಕಟ್ಟಾ, ಗುಳ್ಳಾಪುರ, ನೌಕಾನೆಲೆ ವಜ್ರಕೋಶ,ಬೆಲೇಕೇರಿ, ಅಗಸೂರು, ಶಿರಗುಂಜಿ, ಹೊನ್ನಳ್ಳಿ, ಮಾಸ್ತಿಕಟ್ಟಾ, ರಾಮನಗುಳಿ, ಹಡಿನಗದ್ದೆ, ಹಳವಳ್ಳಿ, ಗುಂಡಬಾಳಾ, ಅಗ್ರಗೋಣ ಹಾಗೂ ಅಂಕೋಲಾ ಪಟ್ಟಣದ ಫೀಡರುಗಳ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 7 ರ ಗುರುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಬಹುದು ಗ್ರಾಹಕರು ಸಹಕಾರ ನೀಡಬೇಕು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಜಿಲ್ಲೆಯ ಕರಾವಳಿ ತಾಲೂಕುಗಳಾದ ಭಟ್ಕಳ್,ಹೊನ್ನಾವರ,ಕುಮಟಾ, ಕಾರವಾರ ತಾಲೂಕುಗಳಲ್ಲಿಯೂ ತ್ರೈಮಾಸಿಕ ನಿರ್ವಹಣಾ ಕೆಲಸ ಇರುವದರಿಂದ ಆಯಾ ತಾಲೂಕು ವ್ಯಾಪ್ತಿಯಲ್ಲಿಯೂ ಸೆ 7ರ ಗುರುವಾರ ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ವ್ಯತ್ಯಯ ವಾಗುವ ಸಾದ್ಯತೆ ಇದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button