ಶಿರಸಿ: ಸನಾತನ ಹಿಂದು ಧರ್ಮದ ಹುಟ್ಟಿಗೆ ಪೂರ್ವಜರು ಕಾರಣೀಕರ್ತರು. ಹಲವಾರು ಮಹನೀಯರ ತ್ಯಾಗದಿಂದ ಜನ್ಮ ತಾಳಿದ ಹಿಂದೂ ದೇಶದಲ್ಲಿ ತಮಿಳುನಾಡಿನ ಸಚಿವ ಉದಯ ಸ್ಟಾಲಿನ್ ನೀಡಿದ ಬೇಜವ್ದಾರಿ ಹೇಳಿಕೆ ವಿರುದ್ಧ ನಾವೆಲ್ಲರೂ ಸಂಘಟಿತರಾಗಿ ಹೋರಾಡುವ ಅನಿವಾರ್ಯತೆಯಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಶಿರಸಿ ನಗರದ ಹಳೆ ಬಸ್ ನಿಲ್ದಾಣದ ವೃತ್ತದ ಬಳಿ ಉದಯನಿಧಿ ಸ್ಟಾಲಿನ್ ಪ್ರತಿಕೃತಿ ದಹಿಸಿ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.
ಸನಾತನ ಧರ್ಮದವನ್ನು ಅವಹೇಳನ ಮಾಡಿದ ತಮಿಳುನಾಡಿನ ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಉದಯನಿಧಿ ಸ್ಟಾಲಿನ್ ಮೇಲೆ ಪ್ರಕರಣ ದಾಖಲಿಸಿ, ಬಂಧಿಸುವoತೆ ಆಗ್ರಹಿಸಿ, ಹಿಂದೂ ಜಾಗರಣ ವೇದಿಕೆ ಹಾಗೂ ವಿವಿಧ ಹಿಂದೂ ಸಂಘಟನೆಯ ವತಿಯಿಂದ ನಗರದ ಹಳೆ ಬಸ್ ನಿಲ್ದಾಣದ ವೃತ್ತದ ಬಳಿ ಉದಯನಿಧಿ ಸ್ಟಾಲಿನ್ ಪ್ರತಿಕೃತಿ ದಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸನಾತನ ಹಿಂದು ಧರ್ಮದ ಹುಟ್ಟಿಗೆ ಪೂರ್ವಜನರು ಕಾರಣೀಕರ್ತರು, ಹಲವಾರು ಮಹನೀಯರ ತ್ಯಾಗದಿಂದ ಜನ್ಮ ತಾಳಿದ ಹಿಂದೂ ದೇಶದಲ್ಲಿ ತಮಿಳುನಾಡಿನ ಸಚಿವ ಉದಯ ಸ್ಟಾಲಿನ್ ನೀಡಿದ ಬೇಜವ್ದಾರಿ ಹೇಳಿಕೆ ವಿರುದ್ಧ ನಾವೆಲ್ಲರೂ ಸಂಘಟಿತರಾಗಿ ಹೋರಾಡುವ ಅನಿವಾರ್ಯತೆಯಿದೆ ಎಂದರು.
ಹಿಂದೂಸ್ಥಾನದ ಜನತೆ ಹಿಂದಿನoತೆ ಇಲ್ಲ. ಜಗತ್ತಿಗೆ ತಿಳಿದಿದೆ. ಕಾಲ ಬದಲಾಗಿದೆ ಎಂಬುದನ್ನು ಹಿಂದೂ ಧರ್ಮ ವಿರೋಧಿಸುವವರು ಅರ್ಥಮಾಡಿಕೊಳ್ಳಬೇಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಲಿಷ್ಠ ಭಾರತ ರೂಪುಗೊಳ್ಳುತ್ತಿದ್ದು, ಅಯೋಧ್ಯಾದಲ್ಲಿ ಶ್ರೀರಾಮ ಮಂದಿರ ಸೇರಿದಂತೆ ಹಿಂದೂ ಧರ್ಮ ಮತ್ತೊಮ್ಮೆ ಬಲಿಷ್ಠವಾಗಿ ತಲೆ ಎತ್ತಲಿದೆ ಎಂದರು. ದೇಶದ ಅನ್ನ ತಿಂದು ಇಂತಹ ಹೇಳಿಕೆ ನೀಡಿರುವ ಸ್ಟಾಲಿನ್ ಗೆ ದೇಶದಲ್ಲಿ ಅವಕಾಶವಿಲ್ಲ ಎಂಬುದನ್ನು ತೋರಿಸಿಕೊಡಬೇಕಾಗಿದೆ. ಸಂವಿಧಾನ ಬದ್ಧ ಪ್ರಮಾಣ ವಚನ ಸ್ವೀಕರಿಸಿದ ಸ್ಟಾಲಿನ್ ಮೇಲೆ ರಾಜ್ಯಪಾಲರು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಐ.ಎನ್.ಡಿ.ಎ ರಾಜಕೀಯ ಒಕ್ಕೂಟ ನಿಲುವು ಸ್ಪಷ್ಟಪಡಿಸಬೇಕು. ಬುದ್ಧಿಜೀವಿಗಳು ಸ್ವಾರ್ಥ ಸಾಧನೆಗೆ ಸನಾತನ ಧರ್ಮದ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಅವರಿಗೆ ಬುದ್ಧಿ ಕಲಿಸಬೇಕಿದೆ. ಆಸೆ-ಆಮಿಷಗಳನ್ನು ತೋರಿಸಿ, ಮತಾಂತರ ಶಡ್ಯಂತರ ನಡೆಯುತ್ತಿದೆ. ಸಂಘಟಿತರಾಗಿ ವಿರೊಧಿಸಬೇಕಿದೆ ಎಂದರು. ಹಿಂದೂ ಜಾಗರಣ ವೇದಿಕೆಯ ಕೇಶವ ಮರಾಠಿ ಮಾತನಾಡಿ, ಜಾತಿ ಮಧ್ಯದ ಭಿನ್ನಾಭಿಪ್ರಾಯ ಮರೆತು ನಾವೆಲ್ಲರೂ ಜಾಗೃತರಾಗಬೇಕು. ಸನಾತನ ಧರ್ಮವನ್ನು ಅವಹೇಳನ ಮಾಡಿದ ತಮಿಳುನಾಡಿನ ಮುಖ್ಯಮಂತ್ರಿ ಉದಯ ಸ್ಟಾಲಿನ್ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಬೇಕು. ಮುಂದಿನ ದಿನಗಳಲ್ಲಿ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನಿಲ್ಲಬೇಕು ಎಂದು ಒತ್ತಾಯಿಸಿದರು. ಉದಯ ಸ್ಟಾಲಿನ್ ಸಚಿವ ಸ್ಥಾನ ವಜಾಗೊಳಿಸಿ, ಬಂಧಿಸುವAತೆ ಸೂಚನೆ ನೀಡುವಂತೆ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ತಹಸೀಲ್ದಾರ ಶ್ರೀಕೃಷ್ಣ ಕಾಮಕರ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಕಳುಹಿಸಲಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಹರೀಶ ಕರ್ಕಿ, ತಾಲೂಕಾ ಸಂಚಾಲಕ ಸತೀಶ ನಾಯ್ಕ, ಚಂದ್ರು ಎಸಳೆ, ಆರ್.ಡಿ.ಹೆಗಡೆ, ಆರ್.ವಿ.ಹೆಗಡೆ ಚಿಪಗಿ ಗಣಪತಿ ನಾಯ್ಕ, ವೀಣಾ ಶೆಟ್ಟಿ, ಸೀತಾರಾಮ ಭಟ್ಟ, ಉಷಾ ಹೆಗಡೆ, ರಾಜೇಶ ಶೆಟ್ಟಿ, ಗ್ರಾ.ಪಂ ಅಧ್ಯಕ್ಷ ಪ್ರದೀಪ ಹೆಗಡೆ ಮತ್ತಿತರರು ಇದ್ದರು.
ವಿಸ್ಮಯ ನ್ಯೂಸ್, ಶಿರಸಿ