ಸರ್ಕಾರಿ ಉದ್ಯೊಗ ಹುಡುಕುತ್ತಿರುವವರಿಗೆ ಇದೊಂದು ಅತ್ಯುತ್ತಮ ಅವಕಾಶ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2 ಸಾವಿರ ಹುದ್ದೆಗಳಿಗೆ (Sbi po exam) ನೇಮಕಾತಿ ನಡೆಯಲಿದ್ದು, ಈ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಹೌದು, (SBI Recruitment 2023) ಎಸ್‌ಬಿಐನಲ್ಲಿ 2 ಸಾವಿರ ಪ್ರೊಬೇಷನರಿ ಆಫೀಸರ್ (ಪಿಓ) ಹುದ್ದೆಗಳ ನೇಮಕಾತಿಗಾಗಿ, ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 36 ರಿಂದ 63 ಸಾವಿರ ಆರಂಭಿಕ ವೇತನ ಇರಲಿದ್ದು, ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 27, 2023 ರ ಮೊದಲು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ( SBI Recruitment 2023) ಅಧಿಕೃತ ಅಧಿಸೂಚನೆಯಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರುವುದು ಕಡ್ಡಾಯವಾಗಿದೆ. ಅಲ್ಲದೆ, ಕನಿಷ್ಠ 21 ವರ್ಷಗಳು ಹಾಗು ಗರಿಷ್ಠ 30 ವರ್ಷಗಳನ್ನು ಮೀರಿರಬಾರದು.
ಅರ್ಜಿ ಸಲ್ಲಿಕೆ ಯಶಸ್ವಿಯಾದ ಬಳಿಕ ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ, ಮುಖ್ಯಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ, ಸಂದರ್ಶನ ಹಾಗು ಗುಂಪು ಚರ್ಚೆ ನಡೆಯಲಿದ್ದು, ಅಂತಿಮವಾಗಿ ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಬಳಿಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಪೂರ್ವಭಾವಿ ಪರೀಕ್ಷೆ ಅಕ್ಟೋಬರ್ 2 ರಂದು ಮತ್ತು ನೆವೆಂಬರ್ 2023 ನಡೆಯಲಿದೆ.
ಬ್ಯಾಂಕ್ | SBI |
ಒಟ್ಟು ಹುದ್ದೆಗಳ ನೇಮಕಾತಿ | 2,000 |
ಹುದ್ದೆಯ ಹೆಸರು | PO |
ಮಾಸಿಕ ವೇತನ | 36,000-63,840 |
ಎರಡನೇಯ ಹಂತದ ಮುಖ್ಯ ಪರೀಕ್ಷೆ ಡಿಸೆಂಬರ್ 2023 ರಂದು ಹಾಗು ಮೂರನೇ ಹಂತದ ಸಂದರ್ಶನ ಫೆಬ್ರವರಿ 2024 ರಂದು ನಿಗದಿಗೊಮಡಿದೆ. ಈ ಕೆಳಗೆ ಎಸ್‌ಬಿಐನ ಅಧಿಸೂಚನೆ, ಸಂಬoಧಪಟ್ಟ ಅಧಿಕೃತ ವೆಬ್‌ಸೈಟಿನ ಲಿಂಕ್, (Sbi po exam) ಅರ್ಜಿ ಸಲ್ಲಿಸುವ ಲಿಂಕ್ ಮತ್ತು ವಿಧಾನದ ಮಾಹಿತಿ ನೀಡಲಾಗಿದೆ.
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | ಸೆಪ್ಟೆಂಬರ್ 27, 2023 |
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್‌ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಇನ್ನು ಹೆಚ್ಚಿನ ಉದ್ಯೊಗಾವಕಾಶ, ನೇಮಕಾತಿ, ನೇರಸಂದರ್ಶನ, ಇತ್ತಿಚಿನ ಉದ್ಯೋಗದ ಕುರಿತ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್