Follow Us On

Google News
Focus News
Trending

ಯಶೋದಾ-ಕೃಷ್ಣ ಸ್ಪರ್ಧೆ: ಕೃಷ್ಣನ ಬಾಲಲೀಲೆಯ ಅಭಿನಯದ ಪ್ರದರ್ಶನ

5 ವರ್ಷದೊಳಗಿನ ಮಗುವಿನೊಂದಿಗೆ ತಾಯಿ ಯಶೋದೆಯಾಗಿ ಪಾಲ್ಗೊಳ್ಳಬಹುದಾಗಿದೆ

ಕುಮಟಾ: ನಮ್ಮ ಜೀವನ ಸಂಸ್ಕೃತಿಯ ಹೃದಯದಲ್ಲಿಯೇ ಯಶೋದೆ-ಕೃಷ್ಣನಿಗೆ ವಿಶೇಷ ಸ್ಥಾನವಿದೆ. ಮಕ್ಕಳ ಭವಿತವ್ಯವನ್ನು ರೂಪಿಸುವಲ್ಲಿ ತಾಯಿಯ ಪಾತ್ರ ಹೇಗೆ ಮಹತ್ವಪೂರ್ಣವೋ ಅಂತೆಯೇ ಕೃಷ್ಣ ದೇವನಾಗಿಯೂ ಆತನ ವ್ಯಕ್ತಿತ್ವ ರೂಪಿಸುವಲ್ಲಿ ಯಶೋದೆ ಪಾತ್ರವೂ ಮಹತ್ವಪೂರ್ಣವಾಗಿದೆ.

ಕೃಷ್ಣ ಜನ್ಮದಿನೋತ್ಸವದ ಪ್ರಯುಕ್ತ ರೋಟರಿ ಏನ್ಸ್ ಕ್ಲಬ್ ಕುಮಟಾ ವತಿಯಿಂದ ಕುಮಟಾ ತಾಲೂಕಾ ಮಟ್ಟದಲ್ಲಿ ಯಶೋದಾ-ಕೃಷ್ಣ ಸ್ಪರ್ಧೆ ಏರ್ಪಡಿಸಲಾಗಿದ್ದು, 5 ವರ್ಷದೊಳಗಿನ ಮಗುವಿನೊಂದಿಗೆ ತಾಯಿ ಯಶೋದೆಯಾಗಿ ಪಾಲ್ಗೊಳ್ಳಬಹುದಾಗಿದೆ. 3 ನಿಮಿಷಗಳ ಕಾಲಾವಕಾಶದಲ್ಲಿ ಕೃಷ್ಣನ ಬಾಲಲೀಲೆಗಳನ್ನು ಅಭಿನಯದ ಮೂಲಕ ಪ್ರದರ್ಶಿಸಬಹುದಾಗಿದೆ.

‘ಹ್ಯಾಂಗ್ಯೋ Ice-cream’ ಪ್ರಧಾನ ಪ್ರಾಯೋಜಕತ್ವವನ್ನು ಹಾಗೂ ‘ಆಭರಣ ಜ್ಯುವೆಲರ್ಸ್’ ಸಹಪ್ರಾಯೋಜಕತ್ವ ವಹಿಸಲಿದ್ದು ಈ ಸ್ಪರ್ಧೆಯು ನಾದರ್ಶೀ ಕಲಾಕೇಂದ್ರದಲ್ಲಿ ಸೆ. 16, ಶನಿವಾರ, ಅಪರಾಹ್ನ 2 ಗಂಟೆಗೆ ನಡೆಯಲಿದ್ದು, ಆಸಕ್ತರು ತಮ್ಮ ಹೆಸರನ್ನು ರೋಟರಿ ಏನ್ಸ್ ಕಾರ್ಯದರ್ಶಿ ಶೈಲಾ ರಾಮದಾಸ ಗುನಗಿ ಅವರಲ್ಲಿ ನೋಂದಣಿ ಮಾಡಿಕೊಳ್ಳಬೇಕೆಂದು ರೋಟರಿ ಏನ್ಸ್ ಕ್ಲಬ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಿಸ್ಮಯ ನ್ಯೂಸ್, ಕುಮಟಾ

Back to top button