ಶಿರಸಿ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ತಾಲೂಕಾ ಕ್ರೀಡಾಕೂಟ

ಶಿರಸಿ: ಪರಿಸರದ ಸಂರಕ್ಷಣೆ ಕುರಿತು ಮಕ್ಕಳಿಗೆ ಬಾಲ್ಯದಿಂದಲೇ ಜಾಗೃತಿ ಬರಬೇಕು. ಈ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಶಿರಸಿ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ 14 ವರ್ಷ ವಯೋಮಿತಿ ಒಳಗಿನ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶಕ್ಕೆ ಅನ್ನ ನೀಡುವ ರೈತನು ಮಳೆಯನ್ನೇ ನಂಬಿದ್ದಾನೆ, ದೇಶ ಸಮೃದ್ಧವಾಗಲು ಸಾಧ್ಯ. ಅರಣ್ಯ ರಕ್ಷಣೆ ಅತೀ ಅವಶ್ಯಕ ,ಕಾಲಕಾಲಕ್ಕೆ ಮಳೆ ಸಮರ್ಪಕವಾದಾಗ ಮಾತ್ರ ಭೂತಾಯಿ ಸಮೃದ್ಧ ವಾಗಿರುತ್ತಾಳೆ. ಹೀಗಾಗಿ ಮಕ್ಕಳು ಶಾಲೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಸರ್ಕಾರ ಆದ್ಯತೆ ನೀಡಿದ್ದೇವೆ ಎಂದರು.

ಮಕ್ಕಳ ದೈಹಿಕ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆಗಳು ಅತ್ಯಗತ್ಯ. ಕ್ರೀಡಾ ಕ್ಷೇತ್ರದಲ್ಲಿ ಪಾಲ್ಗೊಂಡಾಗ ಮಾನಸಿಕವಾಗಿಯೂ ವಿದ್ಯಾರ್ಥಿಗಳು ಪ್ರಬಲರಾಗುತ್ತಾರೆ. ಬಂದಿರುವ ಪಾಲಕರು, ಪೊಷಕರು ಕ್ರೀಡಾ ಕ್ಷೇತ್ರಕ್ಕೆ ಸಹಕಾರ ನೀಡಬೇಕು. ಸಣ್ಣ ಪುಟ್ಟ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು. ಮಕ್ಕಳ ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕು. ಕ್ರೀಡೆಯನ್ನು ವಯಕ್ತಿಕವಾಗಿ ಪರಿಗಣಿಸದೇ ಸ್ಪರ್ಧಾತ್ಮಕವಾಗಿ ನೋಡಬೇಕು. ನಿರ್ಣಾಯಕರು ಸಹ ಪ್ರಾಮಾಣಿಕ ನಿರ್ಣಯಕ್ಕೆ ಆದ್ಯತೆ ನೀಡಬೇಕು ಎಂದರು.

ವಿಸ್ಮಯ ನ್ಯೂಸ್, ಶಿರಸಿ

Exit mobile version