Focus NewsImportant
Trending

ಅಂಕೋಲದಲ್ಲಿ ಮತ್ತೊಂದು ಗಾಂಜಾ ಪ್ರಕರಣ: ಆರೋಪಿ ಅರೆಸ್ಟ್ : ಗಾಂಜಾಸಹಿತ ವಾಹನ ವಶಕ್ಕೆ ಪಡೆದ ಪೊಲೀಸರು

ಅಂಕೋಲಾ: ಕಳೆದ ಎರಡು ದಿನಗಳ ಹಿಂದಷ್ಟೇ ರಾ ಹೆ 66 ರ ಶೆಟಗೇರಿ (ಹೊನೈ ಬೈಲ್ ಬೀಚ್ ಕ್ರಾಸ್ ಬಳಿ ) ಮಾದಕ ವಸ್ತು ಗಾಂಜಾ ಸಾಗಾಟ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಒರ್ವ ಆರೋಪಿಯನ್ನು ಬಂಧಿಸಲಾಗಿತ್ತು. ಅದಾದ ಎರಡು ದಿನದಲ್ಲಿ ಪ್ರತ್ಯೇಕ ಮತ್ತೊಂದು ಪ್ರಕರಣ ದಾಖಲಾಗಿದ್ದು ಪಟ್ಟಣ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸ್ಥಳೀಯ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ
ಪಟ್ಟಣದ ಕಾಕರಮಠ ನಿವಾಸಿ ಅಪ್ತಾಬ್ ಅಲ್ತಾಪ ಶೇಖ (31) ಬಂಧಿತ ಆರೋಪಿಯಾಗಿದ್ದು ಈತನಿಂದ ಸುಮಾರು 7500 ರೂಪಾಯಿ ಮೌಲ್ಯದ 163 ಗ್ರಾಂ ಗಾಂಜಾ ಮತ್ತು ಸಾಗಾಟಕ್ಕೆ ಬಳಸಿದ 30 ಸಾವಿರ ರೂಪಾಯಿ ಮೌಲ್ಯದ ಸ್ಕೂಟಿ ವಾಹನ ವಶಪಡಿಸಿಕೊಳ್ಳಲಾಗಿದೆ.

ಆರೋಪಿತನು ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಸಾಗಿಸುತ್ತಿದ್ದ ಸಂದರ್ಭದಲ್ಲಿ ಅಂಬಾರಕೊಡ್ಲ ರಸ್ತೆಯ ಅಲ್ ಬಿಲಾಲ್ ಮಸೀದಿ ಕ್ರಾಸ್ ಬಳಿ
ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.ಅಂಕೋಲಾ ಪೊಲೀಸ್ ನಿರೀಕ್ಷಕ ಜಾಕ್ಸನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ
ಪಿ.ಎಸ್. ಐ ಗಳಾದ ಪ್ರೇಮನಗೌಡ ಪಾಟೀಲ್, ಮಹಾಂತೇಶ ವಾಲ್ಮೀಕಿ ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ, ರೋಹಿದಾಸ ದೇವಾಡಿಗ, ಶ್ರೀಕಾಂತ ಕಟಬರ, ನಾಗರಾಜ ಹೋತನಹಳ್ಳಿ, ಮನೋಜ,.ಡಿ, ಗುರುರಾಜ ನಾಯ್ಕ, ಸತೀಶ ಅಂಬಿಗ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಕಾರ್ಯ ನಿಮಿತ್ತ ಅಂಕೋಲಾ ಠಾಣೆಗೆ ಭೇಟಿ ನೀಡಿದ್ದ ಎಸ್ ಪಿ ವಿಷ್ಣುವರ್ಧನ್ ಸ್ಥಳೀಯ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಡಿ ವೈ ಎಸ್ಪಿ ವೆಲೆಂಟೆನ್ ಡಿಸೋಜಾ ಹಾಜರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ. ಅಂಕೋಲಾ

Back to top button