ಕುಮಟಾ: ಒಳ್ಳೆಯ ಮನುಷ್ಯರಾಗಲು ತಿಳುವಳಿಕೆ ಮುಖ್ಯ. ತಿಳುವಳಿಕೆಯುಳ್ಳವನು ಜಾಗೃತನಾಗಿರುತ್ತಾನೆ. ಅರಿವು ಹೊಂದಿರುತ್ತಾನೆ. ಅರಿವಿನ ಕೀಲಿಕೈ ವಿಸ್ತಾರವಾದ ಓದು. ಆದ್ದರಿಂದ ಗ್ರಂಥಾಲಯವನ್ನು ಉಪಯೋಗಿಸಲು ಮರೆಯದಿರಿ ಎಂದು ಸರಕಾರಿ ಪದವಿ ಪೂರ್ವ ಕಾಲೇಜು ಹಿರೇಗುತ್ತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಕಾರವಾರಕ್ಕೆ ವರ್ಗಾವಣೆ ಹೊಂದಿ ನಿರ್ಗಮಿಸುತ್ತಿರುವ ಆಂಗ್ಲ ಭಾಷಾ ಉಪನ್ಯಾಸಕಿಯಾದ ಶ್ರೀಮತಿ ಸುಕನ್ಯಾ ಭಟ್ಟ ರವರು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಿತನುಡಿದರು.
ಹಿರೇಗುತ್ತಿ ಕಾಲೇಜಿನ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಕಾಲೇಜಿನ ಒಳ್ಳೆಯ ವಾತಾವರಣವನ್ನು, ಇಲ್ಲಿಯ ಸೇವಾ ದಿನಗಳನ್ನು, ಉಪನ್ಯಾಸಕರ ಪ್ರೀತಿ ವಿಶ್ವಾಸದ ಒಡನಾಟವನ್ನು ಹಾಗೂ ವಿದ್ಯಾರ್ಥಿಗಳ ಮುಗ್ಧತೆಯನ್ನು ಸ್ಮರಿಸಿಕೊಳ್ಳುತ್ತಾ ಭಾವತುಂಬಿ ಮಾತನಾಡಿದರು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಾದ ಶ್ರೀಮತಿ ನೇತ್ರಾವತಿ ನಾಯಕ, ಶ್ರೀಮತಿ ವಿಜಯಲಕ್ಷಿ ನಾಯಕ ಹಾಗೂ ರಮೇಶ ಗೌಡ ಅನಿಸಿಕೆ ಹಂಚಿಕೊoಡರು. ಪ್ರಾಂಶುಪಾಲರಾದ ಶ್ರೀ ನಾಗರಾಜ ಗಾಂವಕರ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕರಾದ ಶ್ರೀಮತಿ ಶಾರದಾ ನಾಯಕ, ಶ್ರೀಮತಿ ಸುಜಾತಾ ನಾಯಕ, ಶ್ರೀಮತಿ ಶೀಲಾ ನಾಯ್ಕ, ಶ್ರೀಮತಿ ಸೀಮಾ ಪಟಗಾರ ಸನ್ಮಾನ ನೆರವೇರಿಸಿದರು. ಲತಾ ನಾಯ್ಕ, ಮಹಾಲಕ್ಷಿ ವಿನಯಾ ಗೌಡ ಹಾಗೂ ನೇತ್ರಾವತಿ ಗಾಂವಕರ್ ಸಹಕರಿಸಿದರು. ವಿದ್ಯಾರ್ಥಿನಿ ಸುಶ್ಮಿತಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ವಿಸ್ಮಯ ನ್ಯೂಸ್, ಕುಮಟಾ