Important
Trending

ಬೀಗ ಮುರಿದು ಒಳನುಗ್ಗಿದ ಕಳ್ಳರಿಗೆ ನಿರಾಶೆ! ಹತಾಶೆಗೊಂಡು ಕೈಗೆ ಸಿಕ್ಕ ಸಿಗರೇಟ್ ಪ್ಯಾಕೇಟ್ ಕದ್ದೊಯ್ದ ಕಳ್ಳರು

ಭಟ್ಕಳ: ಹೋಟೆಲ್ ಬಾಗಿಲನ್ನು ಮುರಿದು ಒಳ ನುಗ್ಗಿದ ಮುಸುಕು ದಾರಿ ಕಳ್ಳರಿಗೆ ಏನೂ ಸಿಕ್ಕಿಲ್ಲ. ಇದರಿಂದ ನಿರಾಶೆಗೊಂಡು ಅಲ್ಲೇ ಇದ್ದ ಸಿಗರೇಟ್ ಪ್ಯಾಕೇಟ್ ಗಳನ್ನು ಕದ್ದು ಪರಾರಿಯಾಗಿದ್ದಾರೆ.! ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗದಂತೆ ಮಾಡಲು ಕಳ್ಳರು, ಸಿಸಿಟಿವಿ ಕ್ಯಾಮರಾ ತೆರುಗಿಸಿದ್ದು, ಸೆರೆಯಾಗಿದೆ.

ಹೌದು, ಭಟ್ಕಳದ ಮಣ್ಕುಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಹಳ್ಳಿ ಮನೆ ಹೋಟೆಲ್ ಗೆ ನಸುಕಿನ ವೇಳೆಗೆ ಬೀಗ ಮುರಿದು ಕಳ್ಳರು ಒಳ ನುಗ್ಗಿದ್ದರು. ಬಳಿಕ ಹೋಟೆಲ್ ಮುಂಭಾಗದಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರಾ ವಾಯರ್ ಕಟ್ ಮಾಡಿದ್ದಾರೆ. ಹೀಗೆ ಎಲ್ಲೂ ಕಳ್ಳತನ ದೃಶ್ಯ ಸೆರೆಯಾಗದಂತೆ ಮಾಡಿ, ಒಳ ನುಗ್ಗಿದ್ದರು.

ಆದರೆ ಕಳ್ಳರು ತಾವು ಅಂದುಕೊoಡoತೆ ಹೋಟೆಲ್ ನಲ್ಲಿ ಹೆಚ್ಚಿನ ನಗದು ಇಲ್ಲದೆ ಇರುವ ಹಿನ್ನೆಲೆ ಅಲ್ವ ಸ್ವಲ್ಪ ನಗದನ್ನು ದೋಚುವ ಜೊತೆಗೆ ಸಾವಿರಕ್ಕೂ ಅಧಿಕ ಮೌಲ್ಯದ ಸಿಗರೇಟ್ ಪ್ಯಾಕೆಟ್ ಅನ್ನು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button